ಕಾವೇರಿ ಆಯ್ತು, ಈಗ ಮಹದಾಯಿ ಸರದಿ : ಮಾರ್ಚ್‌ನಲ್ಲಿ ಅಂತಿಮ ತೀರ್ಪು ಸಾಧ್ಯತೆ

ಪಣಜಿ : ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಪಾಂಚಾಲ ನೇತೃತ್ವದ ಮಹದಾಯಿ ನ್ಯಾಯ ಮಂಡಳಿ ಎದುರು ದೆಹಲಿಯಲ್ಲಿ ನಡೆದ ಅಂತಿಮ ಸುತ್ತಿನ ವಾದ ಬುಧವಾರ ಮುಕ್ತಾಯಗೊಂಡಿದ್ದು, ಮಾರ್ಚ್‌ನಲ್ಲಿ ಅಂತಿಮ ತೀರ್ಪು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಗೋವಾದ ಎಲ್ಲಾ ಆಕ್ಷೇಪಗಳಿಗೆ ಕರ್ನಾಟಕದ ಪರವಾಗಿ ಅಶೋಕ್‌ ದೇಸಾಯಿ ಹಾಗೂ ಮೋಹನ್‌ ಕಾತರಕಿ ವಾದ ಮಂಡಿಸಿದರು. ಟ್ರಿಬ್ಯುನಲ್‌ ಮುಂದಿರುವುದು ಸಹೋದರರ ನಡುವಿನ ಪಾಲು ಹಂಚಿಕೆಯ ದಾವೆಯಲ್ಲ. ಇದು ನೀರು ಹಂಚಿಕೆಯ ಪ್ರಕರಣ. ಇಲ್ಲಿ ಯಾರಿಗೂ ಅನ್ಯಾಯವಾಗಬಾರದು. ಇದರಿಂದಾಗಿ ಪರಿಸರ, ಪ್ರಾಣಿ-ಪಕ್ಷಿಗಳಿಗೂ ಯಾವುದೇ ರೀತಿಯ ಧಕ್ಕೆಯಾಗದಂತೆ ಇತ್ಯರ್ಥವಾಗಬೇಕು. ಮಹದಾಯಿಯಲ್ಲಿನ 200ಟಿಎಂಸಿ ನೀರಿನಲ್ಲಿ 9 ಟಿಎಂಸಿ ನೀರನ್ನು ಗೋವಾ ಬಳಕೆ ಮಾಡುತ್ತಿದೆ. ಇನ್ನುಳಿದ ನೀರು ಸಮುದ್ರದ ಪಾಲಾಗುತ್ತಿದೆ. ಕರ್ನಾಟಕದಲ್ಲಿ ಹರಿಯುವ 45 ಟಿಎಂಸಿ ನೀರಿನ ಪೈಕಿ ನಾವು 14.98 ಟಿಎಂಸಿ ನೀರನ್ನು ಕೇಳುತ್ತಿದ್ದೇವೆ ಎಂದಿದ್ದಾರೆ.

.

 

Leave a Reply

Your email address will not be published.

Social Media Auto Publish Powered By : XYZScripts.com