ನಾರಾಯಣ ಸ್ವಾಮಿಯನ್ನು ಇನ್ನೂ ಏಕೆ ಬಂಧಿಸಿಲ್ಲ..? : ಜಗದೀಶ್ ಶೆಟ್ಟರ್

ವಿಧಾನಸಭೆಯ ಶೂನ್ಯವೇಳೆಯಲ್ಲಿ ಕಲ್ಕೆರೆ ನಾರಾಯಣಸ್ವಾಮಿ ಪೆಟ್ರೋಲ್ ಸುರಿದ ಪ್ರಕರಣ ಪ್ರತಿಧ್ವನಿ ಕೇಳಿಬಂದಿತು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಷಯ ಪ್ರಸ್ತಾಪಿಸಿದರು. ಕೆ.ಆರ್.ಪುರ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ಸುರಿದಿದ್ದ ಕಲ್ಕೆರೆ ನಾರಾಯಣಸ್ವಾಮಿ

‘ ನಾರಾಯಣಸ್ವಾಮಿ ಪೆಟ್ರೋಲ್ ಸುರಿದ ಹಿನ್ನೆಲೆ ಏನು..? ನಾರಾಯಣಸ್ವಾಮಿಯನ್ನು ಯಾಕೆ ಬಂಧಿಸಿಲ್ಲ..? ಇದಕ್ಕೆ ಗೃಹಸಚಿವರು ಉತ್ತರ ಕೊಡಲಿ ‘ ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.

‘ ರೂಲ್ ೬೯ ಅಡಿಯಲ್ಲಿ ಚೆರ್ಚೆ ಮಾಡಿದ ವಿಪಕ್ಷ ನಾಯಕ‌ ಜಗದೀಶ್ ಶೆಟ್ಟರ್ ಚರ್ಚೆ ಮಾಡಿದರು.  ನಾರಾಯಣಸ್ವಾಮಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿತ್ತು. ತಕ್ಷಣ ಆತನನ್ನು ಬಂಧಿಸಬೇಕಿತ್ತು. ಅದರ ಬದಲು ಎಆರ್ ಓನನ್ನು ತಕ್ಷಣ ವರ್ಗಾವಣೆ ಮಾಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹೆದರುತ್ತಿದ್ದಾರೆ ‘ ಎಂದು ಶೆಟ್ಟರ್ ಆರೋಪಿಸಿದ್ದಾರೆ.

Leave a Reply

Your email address will not be published.