ರೈತಬಂಧು ಪುಟ್ಟಣ್ಣಯ್ಯ ಸಾವಿನಿಂದ ಮನನೊಂದು ಯುವಕ ಆತ್ಮಹತ್ಯೆ

ಮಂಡ್ಯ : ರೈತರ ಧ್ವನಿಯಾಗಿದ್ದ ಮೇಲುಕೋಟೆಯ ಶಾಸಕ ಪುಟ್ಟಣ್ಯಯ್ಯ ಅವರ ನಿಧನದಿಂದ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮೃತ ಯುವಕನನ್ನು ಚಂದ್ರು (25) ಎಂದು ಹೆಸರಿಸಲಾಗಿದೆ. ಅನೇಕ ವರ್ಷಗಳಿಂದ ಪುಟ್ಟಣ್ಣಯ್ಯ ಅವರ ಜೊತೆ ಹೋರಾಟ ನಡೆಸಿದ್ದ ಚಂದ್ರು, ಪುಟ್ಟಣ್ಣಯ್ಯ ಅವರ ನಿಧನದಿಂದಾಗಿ ಮಾನಸಿಕವಾಗಿ ನೊಂದಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಟ್ಟಣ್ಣಯ್ಯ ಅವರ ಅಭಿಮಾನಿಯಾಗಿದ್ದ ಚಂದ್ರು, ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು.

ನಾನು ಪುಟ್ಟಣ್ಣಯ್ಯ ಅವರ ಅಭಿಮಾನಿ. ಅವರ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಫೆಬ್ರವರಿ 18ರಂದು ಮೃತಪಟ್ಟಿದ್ದ ಪುಟ್ಟಣ್ಣಯ್ಯ ಅವರ ಅಂತಿಮ ಸಂಸ್ಕಾರ ಇಂದು ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ನಡೆಯಲಿದೆ. ಕ್ಯಾತನಹಳ್ಳಿಯ ಸರ್ಕಾರಿ ಶಾಲಾ ಮೈದಾನದಲ್ಲಿ ಬೆಳಗ್ಗೆ 10 .30ರವರೆಗೂ ಸಾರ್ವಜನಿಕರ ದರ್ಶನಕ್ಕೆ ಮೃತದೇಹವನ್ನು ಇಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com