ಮಗ ಪ್ರೇಯಸಿಯೊಂದಿಗೆ ಓಡಿ ಹೋದದ್ದಕ್ಕೆ ತಾಯಿಗೆ ಅದೆಂಥಾ ಶಿಕ್ಷೆ ಕೊಟ್ಬಿಟ್ರು ಪಾಪಿಗಳು !

ಅಹಮದಾಬಾದ್ : ಮಗ ಪ್ರೇಯಸಿಯೊಂದಿಗೆ ಓಡಿಹೋದ ಎಂಬ ಕಾರಣಕ್ಕೆ ಸ್ಥಳೀಯರು ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದಿದೆ.

ನರ್ಮದಾ ಜಿಲ್ಲೆಯ ಗ್ರಾಮವೊಂದರ ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಅವರಿಬ್ಬರ ಪ್ರೀತಿಗೆ ಎರಡೂ ಕುಟುಂಬದ ಪೋಷಕರು ನಿರಾಕರಿಸಿದ್ದರು. ಆದರೆ ಪೋಷಕರ ಮಾತನ್ನು ಕೇಳದ ಪ್ರೇಮಿಗಳು ಮದುವೆಯಾಗಿ ಬಳಿಕ ಊರು ಬಿಟ್ಟು ಪರಾರಿಯಾಗಿದ್ದರು.

ಇದರಿಂದ ಸಿಟ್ಟಿಗೆದ್ದ ಯುವತಿಯ ಪೋಷಕರು ಯುವಕನ ಮನೆಗೆ ಬಂದು ಮಗಳ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯುವಕನ ತಾಯಿ ಇಬ್ಬರ ಬಗ್ಗೆಯೂ ಮಾಹಿತಿಯಿಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದು ಯುವಕನ ತಾಯಿಯನ್ನು ದನದ ಕೊಟ್ಟಿಗೆಯಲ್ಲಿದ್ದ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಾಯಿಯ ಕಿರುಚಾಟ ಕೇಳಿ ಸ್ಥಳೀಯರು ಆಗಮಿಸಿದ್ದು, ಮಹಿಳೆಯ ಸ್ಥಿತಿ ನೋಡಿ ಕೂಡಲೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯ ರಕ್ಷಣೆ ಮಾಡಿದ್ದು, ಯುವತಿ ಕುಟುಂಬಸ್ಥರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ,

Leave a Reply

Your email address will not be published.