Cricket : ಶೂನ್ಯಕ್ಕೆ ಔಟಾಗಿ ಬೇಡದ ದಾಖಲೆ ನಿರ್ಮಿಸಿದ Rohith..!

ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಗೊಂಡಿದೆ. ಸೆಂಚುರಿಯನ್ ಅಂಗಳದಲ್ಲಿ ಬುಧವಾರ ನಡೆದ 2ನೇ ಟಿ20 ಪಂದ್ಯದಲ್ಲಿ ರೋಹಿತ್ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟಾಗಿ ಶೂನ್ಯಕ್ಕೆ (ಗೋಲ್ಡನ್ ಡಕ್) ನಿರ್ಗಮಿಸಿದರು.

ಸೌತ್ ಆಪ್ರಿಕಾ ಬಳರ್ ಜೂನಿಯರ್ ಡಾಲಾ ಅವರ ಎಸೆತದಲ್ಲಿ ರೋಹಿತ್, ಎಲ್ ಬಿ ಬಲೆಗೆ ಬಿದ್ದರು. ಈ ಮೂಲಕ ರೋಹಿತ್, ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ. ರೋಹಿತ್ ಇದುವರೆಗೆ 4 ಸಲ ಡಕ್ ಔಟ್ ಆಗಿದ್ದಾರೆ. ನಂತರದ ಸ್ಥಾನಗಳಲ್ಲಿ ಆಶಿಶ್ ನೆಹ್ರಾ (3) ಹಾಗೂ ಯೂಸುಫ್ ಪಠಾಣ್ (3) ಇದ್ದಾರೆ.

Leave a Reply

Your email address will not be published.