ನನ್ನ ಮನೆಗೆ ನಿತೀಶ್‌ ಕುಮಾರ್‌ ಹಾಗೂ ಮೋದಿ ಭೂತ ಬಿಟ್ಟಿದ್ದಾರೆ : ಲಾಲೂ ಪುತ್ರ ತೇಜ್‌ ಪ್ರತಾಪ್‌

ಪಾಟ್ನಾ : ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ನನ್ನ ಮನೆಗೆ ಮಾಟ ಮಾಡಿಸಿ ದೆವ್ವ ಬಿಟ್ಟಿದ್ದಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರ ಮಗ ತೇಜ್‌ ಪ್ರತಾಪ್‌ ಆರೋಪಿಸಿದ್ದಾರೆ.

ನಾವಿರುವ  ಮನೆಯಲ್ಲಿ ಇವರಿಬ್ಬರೂ ಸೇರಿ ಭೂತಗಳನ್ನು ಬಿಟ್ಟಿದ್ದಾರೆ. ನಮಗೆ ಈ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನಾವು ಈ ಮನೆಯಲ್ಲಿರಬಾರದು ಎಂಬ ಕಾರಣಕ್ಕಾಗಿಯೇ ಭೂತಗಳನ್ನು ಛೂ ಬಿಟ್ಟಿದ್ದಾರೆ. ಆದ್ದರಿಂದ ನಾವು ಬಂಗಲೆಯನ್ನು ಖಾಲಿ ಮಾಡಿಸುತ್ತಿರುವುದಾಗಿ ಹೇಳಿದ್ದಾರೆ.

ಬಿಹಾರದಲ್ಲಿ ಆರ್‌ಜೆಡಿ ಜೊತೆಗೆ ಮೈತ್ರಿ ಮುರಿದುಕೊಂಡ ಬಳಿಕ ಸರ್ಕಾರಿ ಬಂಗಲೆಯನ್ನು ಬಿಡುವಂತೆ ಸೂಚಿಸಲಾಗಿತ್ತು. ಆದರೂ ಅವರು ಸರ್ಕಾರಿ ಬಂಗಲೆ ಬಿಟ್ಟುಹೋಗಿರಲಿಲ್ಲ.

ಆದರೆ ಈಗ ಬಂಗಲೆ ಬಿಟ್ಟು ಹೋಗುತ್ತಿದ್ದು ಮಾಧ್ಯಮಗಳಿಗೆ ಭೂತಚೇಷ್ಟೆಯಿಂದಾಗಿ ಮನೆ ಬಿಟ್ಟು ಹೋಗುತ್ತಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com