MLA ಹ್ಯಾರಿಸ್‌ ಪುತ್ರನ ಪ್ರಕರಣ ಆಯ್ತು,ಈಗ ಮತ್ತೊಬ್ಬ ಕೈ ಶಾಸಕರ ಬೆಂಬಲಿಗರಿಂದ ಗೂಂಡಾಗಿರಿ

ಬೆಂಗಳೂರು : ಶಾಂತಿನಗರದ ಶಾಸಕ ಹ್ಯಾರಿಸ್‌ ಪುತ್ರ ನಲಪ್ಪಾಡ್‌ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಕೈ ಶಾಸಕರ ಬೆಂಬಲಿಗನ ಪುಂಡಾಟ ಬಯಲಿಗೆ ಬಂದಿದೆ.

ತಿಗಳರ ಪಾಳ್ಯದಲ್ಲಿ ಕಾಂಗ್ರೆಸ್‌ ಶಾಸಕ ಎಸ್‌.ಟಿ ಸೋಮಶೇಖರ್‌ ಅವರ ಬೆಂಬಲಿಗರು ಮನೆ ಮನೆಗೆ ಕಾಂಗ್ರೆಸ್‌ ಸಮಾವೇಶಕ್ಕೆ ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಜೋಗಣ್ಣ ಗೌಡ ಎಂಬುವವರ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯಿಂದ ಜೋಗಣ್ಣ ತಪ್ಪಿಸಿಕೊಂಡು ಮನೆಗೆ ಓಡಿದ್ದಾರೆ. ಈ ವೇಳೆ ಮನೆಯ ಎದುರು ಬಂದ ಗೂಂಡಾಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜೊತೆಗೆ ಜೋಗಣ್ಣ ಅವರ ಮನೆ ಕೆಲಸದಾಳು ಪ್ರಕಾಶ್‌ ಎಂಬುವರರ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರಕಾಶ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಶಾಸಕ ಸೋಮಶೇಖರ್‌ ಪ್ರತಿಕ್ರಿಯಿಸಿದ್ದು. 40 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ನನ್ನದು ರೌಡಿಸಂ ಬ್ಯಾಗ್ರೌಂಡ್‌ ಅಲ್ಲ. ಇದು ಸ್ಥಳೀಯರ ಮಧ್ಯೆ ನಡೆದ ಜಗಳ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಚುನಾವಣೆ ಹಿನ್ನೆಲೆಯಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದರಲ್ಲಿ ನನ್ನ ತಪ್ಪಿದೆ ಎಂದು ಸಾಬೀತಾದರೆರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

Leave a Reply

Your email address will not be published.