ರಾಮಕೃಷ್ಣ ಹೆಗಡೆ ನನ್ನ ರಾಜಕೀಯ ಗುರುವೇ ಹೊರತು ದೇವೇಗೌಡರಲ್ಲ : CM ಸಿದ್ಧರಾಮಯ್ಯ

ಬೆಂಗಳೂರು : ದೇವೇಗೌಡರು ನನ್ನ ರಾಜಕೀಯ ಗುರುವಲ್ಲ. ನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾದ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾನು ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದ ದೇವೇಗೌಡರಿಂದಲ್ಲ. ರಾಮಕೃಷ್ಣ ಹೆಗಡೆಯವರಿಂದ. ಬಳಿಕ ನನ್ನ ಸಾಮರ್ಥ್ಯದಿಂದ ನಾನು ಬೆಳೆದುಬಂದು ಈಗ ಮುಖ್ಯಮಂತ್ರಿಯಾಗಿರುವುದಾಗಿ ಹೇಳಿದ್ದಾರೆ.

1983ರಲ್ಲಿ ನಾನು ಸ್ವಂತ ಬಲದಿಂದ ಗೆದ್ದು ಬಂದೆ. ಆಗ ದೇವೇಗೌಡರು ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ.ಯಾರ ಹಂಗಿಲ್ಲದೆಯೇ ಎರಡು ಬಾರಿ ಗೆದ್ದಿದ್ದೆ. ರಾಮಕೃಷ್ಣ ಹೆಗಡೆಯವರು ಅವರ ಸಂಪುಟದಲ್ಲಿ ನನ್ನನ್ನು ಸಚಿವನನ್ನಾಗಿ ಮಾಡಿದ್ದರು.ಬಳಿಕ ನನಗೂ ಹೆಗಡೆಯವರ ಮಧ್ಯೆ ಮನಸ್ತಾಪ ಉಂಟಾಗಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಅದಾದ ಬಳಿಕ ದೇವೇಗೌಡರು ನನ್ನನ್ನು ಕರೆಸಿಕೊಂಡರು ಎಂದಿದ್ದಾರೆ.

ದೇವೇಗೌಡರ ಕುಟುಂಬ ಬೇರೆಯವರ ಏಳಿಗೆಯನ್ನು ಸಹಿಸುವುದಿಲ್ಲ. ಅವರೆಂದಿಗೂ ನನ್ನ ರಾಜಕೀಯ ಗುರುವಲ್ಲ. ಸಿದ್ದರಾಮಯ್ಯನನ್ನು ಬೆಳೆಸಿದ್ದು ನಾನೇ ಎನ್ನುತ್ತಾರೆ. ಆದರೆ ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಅವರಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published.

Social Media Auto Publish Powered By : XYZScripts.com