ರಾಜಕೀಯ ಅಖಾಡಕ್ಕಿಳಿದರಾ ನಟಿ ಪ್ರಿಯಾಮಣಿ : ಪಕ್ಷ ಯಾವುದು ?

ಬೆಂಗಳೂರು : ಕರ್ನಾಟಕದಲ್ಲಿ  ವಿದಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಟಾರ್‌ಗಳ ಕ್ಯಾಂಪೇನ್‌ ಸಹ ಆರಂಭವಾಗುತ್ತಿದೆ. ಕೆಲ ಸ್ಯಾಂಡಲ್‌ವುಡ್‌ ತಾರೆಯರು ಕ್ಯಾಂಪೇನ್‌ ಮಾಡಿದರೆ ಮತ್ತೆ ಕೆಲವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಅದೇ ನಿಟ್ಟಿನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಸಹ ಜನಶಕ್ತಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮದುವೆಯ ಲಾಂಗ್‌ ಗ್ಯಾಪ್‌ ಬಳಿಕ ಪ್ರಿಯಾಮಣಿ ಧ್ವಜ ಎಂಬ ಪೊಲಿಲಿಟಿಕಲ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಜಕೀಯ ದೃಶ್ಯಗಳಿದ್ದು, ಚಜನಶಕ್ತಿ ಎಂಬ ಪಕ್ಷದ ನೇತಾರರಾಗಿ ಪ್ರಿಯಾಮಣಿ ಅಭಿನಯಿಸಿದ್ದಾರೆ. ಇದೇ ಸಿನಿಮಾದ ಚಿತ್ರೀಕರಣದ ಕೆಲ ಫೋಟೋಗಳು, ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದಲ್ಲದೆ, ಶಿವರಾತ್ರಿಯ ದಿನ ಪ್ರಿಯಾಮಣಿ ಶುಭಾಷಯಗಳನ್ನು ಕೋರಿ ತಾವು ರಾಜಕೀಯ ಉಡುಗೆಯಲ್ಲಿರುವ ಫೋಟೋವನ್ನು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರು ರಾಜಕೀಯಕ್ಕೆ ಬರಲು ಸಕಲ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಸುದ್ದಿ ನಿಜವೋ ಸುಳ್ಳೋ ಅವರೇ ಹೇಳಬೇಕಿದೆ.

 

Leave a Reply

Your email address will not be published.

Social Media Auto Publish Powered By : XYZScripts.com