BIGG BOSS ಮನೆಯಲ್ಲಿ ಅಗ್ನಿ ಅವಗಢ : ಬೆಂಕಿಯ ಕೆನ್ನಾಲಿಗೆಗೆ ಕೋಟಿ ಬೆಲೆಯ ವಸ್ತುಗಳು ಭಸ್ಮ

ಬೆಂಗಳೂರು : ಬಿಗ್‌ಬಾಸ್‌ ನಡೆದ ಇನ್ನೋವೇಟಿವ್‌ ಫಿಲಂಸಿಟಿಯ ಮನೆಯಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಿಗ್‌ಬಾಸ್‌ ಮನೆ ಹೊತ್ತಿ ಉರಿದಿದೆ.

ಇಂದು ಮುಂಜಾನೆ 3ಗಂಟೆಯ ವೇಳೆ ಬಿಗ್‌ಬಾಸ್‌ ಮನೆಯಲ್ಲಿರುವ ರಿಸೆಪ್ಷನ್‌ ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಗಢ ಸಂಭವಿಸಿದೆ. ಸ್ಥಳಕ್ಕೆ ಸುಮಾರು 13ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಅಲ್ಲದೆ ಮನೆಯಲ್ಲಿದ್ದ ಸ್ವತಂತ್ರ್ಯ ಹೋರಾಟಗಾರರ ಮೇಣದ ಪ್ರತಿಮೆಗಳೂ ಬೆಂಕಿಗಾಹುತಿಯಾಗಿವೆ. ಬಹುತೇಕ ಮರದ ಹಲಗೆಗಳಿಂದಲೇ ನಿರ್ಮಿತವಾಗಿರುವ ಮನೆಯ ಬಹುತೇಕ ಸೆಟ್‌ಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com