Uttar Pradesh : ಎನ್‌ಕೌಂಟರ್‌ ಭಯದಿಂದ ತಾನೇ ಪೊಲೀಸರಿಗೆ ಶರಣಾದ ಆರೋಪಿ

ಲಖನೌ : ಉತ್ತರ ಪ್ರದೇಶದಲ್ಲಿ ಕೊಲೆ ಆರೋಪಿಯೊಬ್ಬ ಪೊಲೀಸರು ಎನ್‌ಕೌಂಟರ್‌ ಮಾಡುತ್ತಾರೆ ಎಂಬ ಭಯಕ್ಕೆ ಹೆದರಿ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

ಶರಣಾದ ಆರೋಪಿಯನ್ನು ಮುನ್ಷದ್‌ ಅಲಿ ಎಂದು ಹೆಸರಿಸಲಾಗಿದೆ. ಈತ ಭಾನುವಾರ ಉತ್ತರ ಪ್ರದೇಶದ ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸ್‌ ಅಧಿಕಾರಿಯ ಮುಂದೆ ನನಗೆ ಪೊಲೀಸರ ಗುಂಡೇಟಿನಿಂದ ಸಾಯಲು ಇಷ್ಟವಿಲ್ಲ. ಅದಕ್ಕಾಗಿ ನಾನೇ ಶರಣಾಗುತ್ತೇನೆ ಎಂದು ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ. ಅಲ್ಲದೆ ಇನ್ನು ಮುಂದೆ ತನು ಯಾವುದೇ ಅಪರಾಧ ಮಾಡುವುದಿಲ್ಲ. ಈಗ ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುವುದಾಗಿಯೂ ಹೇಳಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ

ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪೊಲೀಸರಿಗ ಖಡಕ್‌ ವಾರ್ನಿಂಗ್‌ ನೀಡಿದ್ದು, ನಿಮಗೆ ಆಯುಧಗಳನ್ನು ನೀಡಿರುವುದು ಭದ್ರವಾಗಿ ಜೇಬಿನಲ್ಲಿ ಇಟ್ಟುಕೊಳ್ಳಲು ಅಲ್ಲ. ಅದನ್ನು ಬಳಸಿ ರೌಡಿಗಳನ್ನು ಮಟ್ಟಹಾಕಲು ಎಂದಿದ್ದರು. ಇದಕ್ಕೆ ಹೆದರಿರುವ ಅಪರಾಧಿಗಳು ತಾವಾಗಿಯೇ ಪೊಲೀಸರ ಮುಂದೆ ಬಂದು ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com