ಸುರಭಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡೈರೆಕ್ಟರ್‌ ಸಂತೋಷ್‌ ಆನಂದ್‌ ರಾಮ್‌

ಬೆಂಗಳೂರು : ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ, ರಾಜ ಕುಮಾರ ಮುಂತಾದ ಹಿಟ್‌ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಇಂದು ಸುರಭಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸಂತೋಷ್‌ ಆನಂದ್‌ ರಾಮ್‌ ಹಾಗೂ ಸುರಭಿ ಅವರ ನಿಶ್ಚಿತಾರ್ಥ ಬಳ್ಳಾರಿಯಲ್ಲಿ ನೆರವೇರಿತ್ತು. ನಿನ್ನೆ ರಾತ್ರಿ ಆರತಕ್ಷತೆ ನಡೆದಿದ್ದು, ಇಂದು ಇಬ್ಬರ ವಿವಾಹ ನೆರವೇರಿದೆ.

ನಿನ್ನೆ ರಾತ್ರಿ ನಡೆದ ಆರತಕ್ಷತೆಯಲ್ಲಿ ಸಿನಿರಂಗದ ಅನೇಕ ಗಣ್ಯರು ಭಾಗಿಯಾಗಿದ್ದು, ಸಂತೋಷ್‌ ಹಾಗೂ ಸುರಭಿ ಅವರಿಗೆ ಶುಬ ಕೋರಿದ್ದಾರೆ. ಇನ್ನು ಇವರ ವಿವಾಹಕ್ಕೆ ಪವರ್‌ ಸ್ಟಾರ್‌ ಪುನಿತ್‌ ರಾಜ್‌ ಕುಮಾರ್‌ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಮಾರಂಭದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌, ಜಗ್ಗೇಶ್‌, ಅನಂತ್‌ ನಾಗ್‌, ದುನಿಯಾ ವಿಜಿ. ಶರಣ್‌, ಸಾ.ರಾ ಗೋವಿಂದು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com