‘ ಮಾಣಿಕ್ಯ ಮಲರಾಯ ಪೂವಿ..’ ಹಾಡಿನ ಸುತ್ತ ವಿವಾದ ಏಕೆ..? ಇಲ್ಲಿದೆ ವಿವರ..

ಕೆಲ ದಿನಗಳ ಹಿಂದೆ ಬಿಡುಗಡೆಗೊಂಡ ‘ ಒರು ಅದಾರ್ ಲವ್ ‘ ಹೆಸರಿನ ಮಲಯಾಳಂ ಚಿತ್ರದ ‘ ಮಾಣಿಕ್ಯ ಮಲಾರಾಯ ಪೂವಿ..’ ಹಾಡು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿತು. ಇದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಎಂಬ 18 ವರ್ಷದ ನಟಿ ತನ್ನ ಮಾದಕ ಅಭಿನಯ, ಮಿಂಚಿನ ಕಣ್ಣೋಟದ ಮೂಲಕ ಅಸಂಖ್ಯ ಪಡ್ಡೆ ಹುಡುಗರ ಮನಗೆದ್ದಳು. ಆದರೆ ಜನಪ್ರಿಯತೆಯ ಜೊತೆಗೆ ಈ ಹಾಡಿನ ಸುತ್ತ ವಿವಾದವೂ ಸೃಷ್ಟಿಯಾಗಿದೆ. ಏನದು ವಿವಾದ..? ಅದಕ್ಕೆ ಕಾರಣವೇನು..? ಇಲ್ಲಿದೆ ವಿವರ..

Image result for priya prakash varrier

‘ಮಾಣಿಕ್ಯ ಮಲಾರಾಯ ಪೂವಿ ‘ ಹಾಡು ಮೂಲತಃ ಕೇರಳದ ಮಲಬಾರ್ ಪ್ರದೇಶದ ಮಾಪಿಳ್ಳೆ ಮುಸ್ಲಿಂ ಸಮುದಾಯದ ಪಾರಂಪರಿಕ ಗೀತೆಯಾಗಿದೆ. ಇದು ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರ್ ಹಾಗೂ ಅವರ ಮೊದಲನೇ ಪತ್ನಿ ಖದೀಜಾ ಅವರಿಬ್ಬರ ನಡುವಿನ ಪ್ರೇಮದ ಕುರಿತು ವರ್ಣನೆಯನ್ನು ಮಾಡುತ್ತದೆ.

Image result for manikya malaraya original

1978 ರಲ್ಲಿ ಕೇರಳದ ಮಲಬಾರಿನ ಮಾಪಿಳ್ಳೆ ಮುಸ್ಲಿಂ ಸಮುದಾಯದ ಪ್ರಾದೇಶಿಕ ಲೋಕ ಗೀತೆ ಎಂಬ ಅರ್ಥದಲ್ಲಿ ಪಿ ಎಮ್ ಜಬ್ಬಾರ್ ಎನ್ನುವವರು ಬರೆದಿದ್ದರು. ಇದನ್ನು ಮಹಮ್ಮದ್ ಹಾಗೂ ಖದೀಜಾ ಪ್ರೇಮವನ್ನು ವರ್ಣಿಸುವ ದೃಷ್ಟಿಯಿಂದ ಥಲಾಸೇರಿ ರಫೀಕ್ ಎಂಬುವವರು ಮೊದಲ ಬಾರಿಗೆ ಹಾಡಿದ್ದರು. 1978 ರಿಂದ ಇಲ್ಲಿಯವರೆಗೆ ಅಂದರೆ ಸುಮಾರು 40 ವರ್ಷಗಳ ಕಾಲ ಈ ಹಾಡು ಕೇರಳ ಜನರ ಪ್ರಾದೇಶಿಕ ಪರಂಪರೆಯ ಭಾಗವಾಗಿತ್ತು.

Image result for priya prakash varrier

ಹಳೆಯ ಹಾಡನ್ನು ಇದೀಗಒರು ಅದಾರ್ ಲವ್ಮಲಯಾಳಂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ವಿನೀತ್ ಶ್ರೀನಿವಾಸನ್ ಹಾಡಿರುವ ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸೂಪರ್ ಹಿಟ್ ಕೂಡ ಆಯಿತು.

Image result for priya prakash varrier

ಆದರೆ ಇದು ಮುಸ್ಲಿಂ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ತೋರಿಸಲಾಗಿದೆ ಎಂಬ ಕಾರಣಕ್ಕೆ ವಿವಾದ ಸೃಷ್ಟಿಯಾಗಿದೆ. ತೆಲಂಗಾಣದ ರಜಾ ಅಕಾಡೆಮಿ ಹಾಗೂ ಜನ ಜಾಗರಣ ಸಮಿತಿ, ನಟಿ ಪ್ರಿಯಾ ವಾರಿಯರ್ ಹಾಗೂ ನಿರ್ದೇಶಕ ಅಬ್ದುಲ್ ವಹಾಬ್ ವಿರುದ್ಧ FIR ದಾಖಲಿಸುವಂತೆ ದೂರು ನೀಡಿವೆ.

Image result for priya prakash varrier

ದೂರಿನ ವಿರುದ್ಧ ನಟಿ ಪ್ರಿಯಾ ಹಾಗೂ ನಿರ್ದೇಶಕ ಅಬ್ದುಲ್ ವಹಾಬ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ನಟಿ ಹಾಗೂ ನಿರ್ದೇಶಕರ ವಿರುದ್ಧ ಎಲ್ಲಿಯೂ, ಯಾವುದೇ FIR ದಾಖಲಾಗದಂತೆ ತಡೆಯಾಜ್ಞೆ ಹೊರಡಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com