ಟೆಸ್ಟ್ ಕ್ರಿಕೆಟ್ ಬಗ್ಗೆ Kevin Pietersen ಭವಿಷ್ಯ : ಟ್ವೀಟ್ ಮಾಡಿದ KP ಹೇಳಿದ್ದೇನು..?

‘ ಟೆಸ್ಟ್ ಮಾದರಿ ಕ್ರಿಕೆಟ್ ‘ ಮಾತ್ರ ನಿಜವಾದ ಕ್ರಿಕೆಟ್ ಎಂಬ ಮಾತಿದೆ. 5 ದಿನಗಳ ನಡೆಯುವ ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರನ ತಾಳ್ಮೆ, ಸಾಮರ್ಥ್ಯ ಪರೀಕ್ಷೆಗೆ ಒಳಪಡುತ್ತದೆ. ಅದರಲ್ಲಿ ಆಟಗಾರನ ನೈಜ ಪ್ರತಿಭೆಯ ಅನಾವರಣವಾಗುತ್ತದೆ.

ಆದರೆ ಚುಟುಕು ಮಾದರಿಯ ಟಿ-20 ಕ್ರಿಕೆಟ್ ಬಂದ ಮೇಲೆ ಮೈದಾನಕ್ಕೆ ಹೋಗಿ ಟೆಸ್ಟ್ ಪಂದ್ಯ ನೋಡುವವರ ಸಂಖ್ಯೆ ಕಡಿಮೆಯಾಗಿದ್ದಂತೂ ನಿಜ. ಈಗಲೂ ಟೆಸ್ಟ್ ಕ್ರಿಕೆಟ್ ಅನ್ನು ಇಷ್ಟ ಪಡುವವರು ಹಲವು ಜನ ಇದ್ದಾರೆ. ಚುಟುಕು ಕ್ರಿಕೆಟ್ ನ ಅಆರ ಜನಪ್ರಿಯತೆ ನಡುವೆ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಬಲ್ಲದೇ..?

ಈ ಬಗ್ಗೆ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿದ್ದಾರೆ. ‘ ಮುಂದಿನ 10 ವರ್ಷಗಳಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ ತಂಡಗಳು ಮಾತ್ರ ಟೆಸ್ಟ್ ಆಡುವ ದೇಶಗಳಾಗಿ ಉಳಿದುಕೊಳ್ಳಲಿವೆ. ಬೇರೆಲ್ಲ ತಂಡಗಳು ವೈಟ್ ಬಾಲ್ ಕ್ರಿಕೆಟ್ (ಏಕದಿನ & ಟಿ20) ಗೆ ಸೀಮಿತವಾಗಲಿವೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com