ಕೆಲಸಗಾರರಿಗೆ ವೇತನ ನೀಡಲು ನೀರವ್‌ ಮೋದಿ ಬಳಿ ದುಡ್ಡಿಲ್ಲವಂತೆ…!!

ದೆಹಲಿ : ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ 11 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್‌ ಮೋದಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲವಂತೆ.

ಹೌದು..ತನ್ನ ನೌಕರರಿಗೆ ಸಂಬಳ ನೀಡಲು ನನ್ನ ಬಳಿ ಹಣವಿಲ್ಲ. ಆದಷ್ಟು ಬೇಗ ಬೇರೆ ಕೆಲಸ ನೋಡಿಕೊಳ್ಳಿ ಎಂದು ತನ್ನ ನೌಕರರಿಗೆ ಸೂಚಿಸಿದ್ದಾರೆ. ಅಲ್ಲದೆ ತಮ್ಮಿಂದಾದ ತಪ್ಪಿಗೆ ನೌಕರರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಸದ್ಯ ನೀರವ್‌ ಮೋದಿ ಬೆಲ್ಜಿಯಂನಲ್ಲಿದ್ದು, ಸಂಸ್ಥೆಯ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ಮಾಹಿತಿ ರವಾನಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬೇರೆ ಕೆಲಸ ನೋಡಿಕೊಳ್ಳುವಂತೆ ತಿಳಿಸಿರುದಾಗಿ ಹೇಳಿದ್ದಾರೆ.

ಕಂಪನಿಯಲ್ಲಿರುವ ಎಲ್ಲಾ ಸ್ಟಾಕ್‌ಗಳನ್ನು ಜಪ್ತಿ ಮಾಡಿದ್ದು, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ಮೂಲಗಳೂ ಬಂದ್ ಆಗಿವೆ. ಆದ್ದರಿಂದ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಪ್ರಕರಣ ಇತ್ಯರ್ತ್ಯವಾದ ಬಳಿಕ ಉಳಿದ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com