ಪತ್ನಿಯನ್ನು ‘Miss’ ಮಾಡಿಕೊಂಡ ಕ್ಯಾಪ್ಟನ್ : ಅನುಷ್ಕಾಗೆ ಕೊಹ್ಲಿಯ Special Message..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಗರಿಷ್ಟ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. ವಿರಾಟ್ ನಾಯಕತ್ವದ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿತು.

ಆದರೆ ಇಷ್ಟೆಲ್ಲ ಯಶಸ್ಸಿನ ನಡುವೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ವಿರಾಟ್ ಕೊಹ್ಲಿಯ ಲೇಟೆಸ್ಟ್ ಇನ್ಸ್ಟಾಗ್ರಾಮ್ ಪೋಸ್ಟ್ ಸಾಕ್ಷಿಯಾಗಿದೆ.

ತಮ್ಮ ಪತ್ನಿಯನ್ನು ತಬ್ಬಿಕೊಂಡಿರುವ ಫೋಟೊ ಒಂದನ್ನು ಕೊಹ್ಲಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ‘ ಮೈ ಒನ್ ಆ್ಯಂಡ್ ಓನ್ಲಿ ‘ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ತಮ್ಮ ಪತ್ನಿ ಅನುಷ್ಕಾ ಬಗ್ಗೆ ತೋರಿರುವ ಪ್ರೀತಿಯನ್ನು ಕಂಡು ಅನೇಕ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com