ನೇಪಾಳದಲ್ಲಿ ಹಂದಿ ಕಡಿದು ಶೋಭಾ ನನ್ನ ಮೇಲೆ ಮಾಟ ಮಾಡ್ಸಿದಾರೆ : KJP ರಾಜ್ಯಾಧ್ಯಕ್ಷ

ತುಮಕೂರು : ‘ ರಾಜಕೀಯದಲ್ಲಿ ಯಡಿಯೂರಪ್ಪ ನನ್ನ ತಂದೆಯಿದ್ದಂತೆ. ನಾನು ಸಿಡಿ ಬಿಡುಗಡೆ ಮಾಡುತ್ತೇನೆ ಎಂದಾಗ ನನ್ನ ಮೇಲೆ ಶೋಭಾ ಕರಂದ್ಲಾಜೆ ಬೆಂಬಲಿಗ ಗೂಂಡಾಗಳು ಕೊಲೆ ಮಾಡಲು ಯತ್ನಿಸಿದರು ‘ ಎಂದು ಕೆಜೆಪಿ ಪಕ್ಷದ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ.

‘ ಯಡಿಯೂರಪ್ಪ ಬಹಳ ಒಳ್ಳೆಯವರು, ಆದರೆ ಶೋಭಾ ಕರಂದ್ಲಾಜೆ ಸರಿಯಿಲ್ಲ. ನನ್ನ ಶತ್ರು ಶೋಭಾ ಕರಂದ್ಲಾಜೆಯೇ ಹೊರತು ಯಡಿಯೂರಪ್ಪ ಅಲ್ಲ . ನನ್ನ ಮುಗಿಸುವ ಉದ್ದೆಶದಿಂದ ಶೋಭಾ ಕರಂದ್ಲಾಜೆ ನೇಪಾಳಕ್ಕೆ ಹೋಗಿ ಹಂದಿ ಕಡಿದು ಮಾಟ ಮಾಡಿಸಿದ್ದಾರೆ‌. ನನ್ನ ಮೇಲೆ ಶಿವಮೊಗ್ಗದಲ್ಲಿ‌ ಹಲ್ಲೆ ನಡೆದಿತ್ತು, ಬೆಂಗಳೂರಿನಲ್ಲಿ ಹಲ್ಲೆಯಾಯಿತು ‘

‘ ನನಗೆ ಜೀವ ಭಯವಿದೆಯಂದೆ ಪೋಲಿಸರಿಗೆ ದೂರು ನೀಡಿದ್ದೇನೆ. ಭಗವತಿ ದೇವಸ್ಥಾನ, ಚೋಟಾಣಿಕೆರೆ, ಕಣ್ಣೂರು ಜಿಲ್ಲೆ ಕೇರಳ ದಲ್ಲಿ ಶೋಭಾ, ಯಡಿಯೂರಪ್ಪ ಮದುವೆಯಾಗಿದ್ದಾರೆ. ನನಗೆ ರಕ್ಷಣೆ ನೀಡಿದರೆ ಮದುವೆಯ ಸಿಡಿ ಬಿಡುಗಡೆ ಮಾಡುತ್ತೇನೆ ‘ ಎಂದಿದ್ದಾರೆ.

 

Leave a Reply

Your email address will not be published.