ಶಾಸಕರ ಪುತ್ರನಿಂದ ಹಲ್ಲೆಗೊಳಗಾದ ವಿದ್ವತ್‌ BJP ಕಾರ್ಯಕರ್ತ ಎಂದ ಅಮಿತ್ ಶಾ

ಪುತ್ತೂರು : ಕಾಂಗ್ರೆಸ್‌ ಮುಖಂಡ ಹ್ಯಾರಿಸ್‌ ಪುತ್ರನಿಂದ ಹಲ್ಲೆಗೊಳಗಾದ ಯುವಕ ವಿದ್ವತ್‌, ಬಿಜೆಪಿ ಕಾರ್ಯಕರ್ತ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಹೇಳಿ ಪೇಚಿಗೆ ಸಿಲುಕಿದ್ದಾರೆ.

ಬಂಟ್ವಾಳದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುವ ವೇಳೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರ ಹಲ್ಲೆ ನಡೆಸುವ ಕೆಲಸ ಮಾಡುತ್ತಿದೆ. ಇದಕ್ಕೆ ಹ್ಯಾರಿಸ್‌ ಮಗನ ಪ್ರಕರಣವೇ ಸಾಕ್ಷಿ. ಶಾಸಕನ ಮಗ ಎಂಬ ಕಾರಣಕ್ಕೆ ಆತನ ಮೇಲೆ ಎಫ್‌ಐಆರ್‌ ದಾಖಲಿಸಿಲ್ಲ. ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾ ಹೇಳಿದ್ದಾರೆ.

ಬಳಿಕ ಅಮಿತ್ ಶಾ ಇತ್ತೀಚೆಗಷ್ಟೇ ಹತ್ಯೆಯಾದ ದೀಪಕ್ ರಾವ್‌ ಮನೆಗೆ ತೆರಳಿದ್ದು ಸಾಂತ್ವನ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com