ಶಾಸಕನ ಪುತ್ರನ ರೌಡಿಸಂ : ಹಲ್ಲೆಗೊಳಗಾಗಿದ್ದ ವಿದ್ವತ್‌ ವಿರುದ್ಧಲೂ FIR ದಾಖಲು

ಬೆಂಗಳೂರು : ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ ರೌಡಿಸಂ ಪ್ರಕರಣ ಸಂಬಂದ ಹಲ್ಲೆಗೊಳಗಾಗಿದ್ದ ಯುವಕ ವಿದ್ವತ್‌ ವಿರುದ್ದವೂ ಎಫ್‌ಐಆರ್‌ ದಾಖಲಾಗಿದೆ.
ಫೆಬ್ರವರಿ. 17ರಂದು ವಿದ್ವತ್‌ ತನ್ನ ಸ್ನೇಹಿತರೊಂದಿಗೆ ಊಟ ಮಾಡಲು ಯುಬಿಸಿಟಿಗೆ ಹೋಗಿದ್ದ ವೇಳೆ ವಿದ್ವತ್‌ ಹಾಗೂ ನಲಪಾಡ್‌ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ವಿದ್ವತ್‌ ನಾನು ಯಾರು ಗೊತ್ತಾ ?, ನನ್ನ ಅಪ್ಪ ಯಾರು ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ವಿದ್ವತ್‌ ಸ್ನೇಹಿತರು ಅರುಣ್ ಬಾಬು ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಎಫ್ಐಆರ್‌ ದಾಖಲಾಗಿದೆ.
ಉದ್ಯಮಿ ಲೋಕನಾಥನ್ ಪುತ್ರ ವಿದ್ವತ್‌ ಅತಿಯಾಗಿ ಕುಡಿದ ಕಾರಣ ಸ್ವತಃ ಬಿದ್ದು ಮುಖಕ್ಕೆ ಗಾಯವಾಗಿದೆ ಎಂದು ಅರುಣ್ ಬಾಬು ದೂರು ನೀಡಿದ್ದರು. ಈ ಸಂಬಂಧ ವಿದ್ವತ್‌ ತಪಾಸಣೆ ಮಾಡಿದ್ದ ವೈದ್ಯರೂ ಸಹ ಆತ ಕುಡಿದಿದ್ದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com