ನಾಲ್ಕು ಕಾಲು ವರ್ಷದಲ್ಲಿ Press Meet ಮಾಡದ ಏಕೈಕ ಪ್ರಧಾನಿ ಮೋದಿ : ಅಂಬರೀಶ್‌

ಮಂಡ್ಯ : ನೀರವ್‌ ಮೋದಿ ಬಗ್ಗೆ ನಮ್ಮ ಮೋದಿಯವರು ಏನು ಹೇಳುತ್ತಾರೆ. ಅವರು ಎನ್‌ ಮೋದಿ, ಇವರೂ ಎನ್‌ ಮೋದಿ. ಆ ಎನ್‌ ಮೇಲಿನ ಆರೋಪದ ಬಗ್ಗೆ ಏನು ಹೇಳುತ್ತಾರೆ ಎಂದು ಕಾಂಗ್ರೆಸ್‌ ನಾಯಕ, ನಟ ಅಂಬರೀಶ್‌, ಪ್ರಧಾನಿ ಮೋದಿಯವರನ್ನು ವ್ಯಂಗ್ಯ ಮಾಡಿದ್ದಾರೆ.

ಇಷ್ಟು ದೊಡ್ಡ ಹಗರಣ ನಡೆದಿದೆ ಇದರ ಬಗ್ಗೆ ಮಾತನಾಡಲು ಒಂದು ಪ್ರೆಸ್‌ ಮೀಟ್‌ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದು, ನಾಲ್ಕೂ ಕಾಲು ವರ್ಷದಲ್ಲಿ ಒಂದೂ ಪ್ರೆಸ್ ಮೀಟ್ ಮಾಡದ ಪ್ರಧಾನಿ ಅಂದ್ರೆ ಅದು ಮೋದಿ. ನಮ್ಮಂಥವರು ಮಾಡುವ ಆರೋಪಗಳಿಗೆ ಪ್ರೆಸ್‌ ಮೀಟ್ ಮಾಡಿ ಉತ್ತರಿಸಲಿ ಎಂದಿದ್ದಾರೆ.

ಇದೇ ವೇಳೆ ರಾಜ್ಯ ಬಜೆಟ್ ವಿಚಾರ ಸಂಬಂಧ ಮಾತನಾಡಿದ ಅವರು, ಸಿಎಂ ಎಲ್ಲ ವರ್ಗದವರನ್ನೂ ಸಮಾಧಾನ ಮಾಡಿದ್ದಾರೆ. ನಮ್ಮ ಸರ್ಕಾರ ಜಿಲ್ಲೆಗೆ ಏನೇನು ಮಾಡಿದೆ ಎಂಬುದನ್ನು ಹೇಳುತ್ತೇನೆ. ಹಲವರಿಗೆ ಸರ್ಕಾರದ ಕೊಡುಗೆ ಬಗ್ಗೆ ಗೊತ್ತಿರಲ್ಲ. ಅದೆಲ್ಲವನ್ನೂ ಗೊತ್ತಾಗುವ ಹಾಗೆ ಮಾಡ್ಬೇಕು.ನಮಗೆ ಪ್ರಚಾರ ಪಡೆಯೋಕೆ ಇಷ್ಟ ಇಲ್ಲ. ಕರ್ತವ್ಯ ದೃಷ್ಟಿಯಿಂದ ಜನಪರ ಕೆಲಸ ಕಾರ್ಯ ಮಾಡ್ತೀವಿ ಅಷ್ಟೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com