ಪೈಲ್ವಾನ್‌ ಸಿನಿಮಾಗಾಗಿ ಇಷ್ಟೆಲ್ಲಾ ಕಷ್ಟ ಪಡ್ತಿದ್ದಾರಂತೆ ಕಿಚ್ಚ ಸುದೀಪ್‌ !

ಬೆಂಗಳೂರು :  ಸ್ಯಾಂಡಲ್‌ವುಡ್‌ನ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌  ಅವರ ಅಭಿನಯದ ವಿಲನ್‌ ಸಿನಿಮಾ ಬಹುತೇಕ ಪೂರ್ಣಗೊಂಡಿದೆ. ಸದ್ಯ ಸುದೀಪ್‌ ಪೈಲ್ವಾನ್‌ ಸಿನಿಮಾಗೆ ತಕ್ಕಂತೆ ಸಿಕ್ಸ್‌ ಪ್ಯಾಕ್‌ಗಾಗಿ ವರ್ಕೌಟ್‌ ಮಾಡುತ್ತಿದ್ದಾರೆ.

ಹೆಬ್ಬುಲಿ ಸಿನಿಮಾದ ಬಳಿಕ ಕೃಷ್ಣ ಅವರ ನಿರ್ದೇಶನದಲ್ಲಿ ಸುದೀಪ್‌ ಮತ್ತೆ ಕಾಣಿಸಿಕೊಳ್ಳುತ್ತಿದ್ದು, ಪೈಲ್ವಾನ್‌ ಸಿನಿಮಾಗಾಗಿ  ಸುದೀಪ್‌ ಹೆಚ್ಚಿನ ವರ್ಕೌಟ್‌ ಮಾಡುತ್ತಿದ್ದಾರೆ.

ಈ ಸಿನಿಮಾಕ್ಕಾಗಿ ಜಿಮ್‌ಗೆ ಹೋಗಲು ಆರಂಭಿಸಿದ್ದು, ಸಿನಿಮಾದಲ್ಲಿ ಸಿಕ್ಸ್‌ಪ್ಯಾಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೀತ್‌ ದೇವಯ್ಯ ಅವರಿಂಗ ತರಬೇತಿ ಪಡೆಯುತ್ತಿದ್ದು, ಮಾರ್ಚ್‌ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ಶೂಟಿಂಗ್‌ ಪ್ರಾರಂಭಿಸಲಿದ್ದಾರೆ.

ಇದಕ್ಕೂ ಮುನ್ನ ಥೈಲ್ಯಾಂಡ್‌ನಲ್ಲಿ ಬಾಕ್ಸಿಂಗ್‌ ಸಹ ಅಭ್ಯಾಸ ಮಾಡಲಿದ್ದಾರೆ. ಪೈಲ್ವಾನ್‌ ಹೆಸರಿನ ಪಾತ್ರಕ್ಕೆ ತಕ್ಕಂತೆ ಸುದೀಪ್‌ ವರ್ಕೌಟ್‌ ಮಾಡುತ್ತಿರುವುದಾಗಿ ನಿರ್ದೇಶಕ ಕೃಷ್ಣ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com