ಶಾಸಕರ ಪುತ್ರನ ಪ್ರಕರಣಕ್ಕೆ HDK ಯಿಂದ ಬಿಗ್‌ ಟ್ವಿಸ್ಟ್‌ : ಹಲ್ಲೆ ಹಿಂದಿದೆಯಂತೆ ಭಾರೀ ಹಗರಣ

ಹುಬ್ಬಳ್ಳಿ: ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಪುತ್ರನ ಪ್ರಕರಣ ಸಂಬಂಧ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕೇವಲ ಕಾಲು ತಾಕಿದ್ದಕ್ಕೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಫಾಡ್ ಹಲ್ಲೆ ಮಾಡಲಿಲ್ಲ. ಇದರ ಹಿಂದೆ ಕೋಟ್ಯಾಂತರ ರೂಪಾಯಿಗಳ ಹಗರಣ ಇದೆ. ಕಂಪ್ಯೂಟರ್ ಹ್ಯಾಕಿಂಗ್ , ಬಿಟ್ ಕಾಯಿನ್ , ಹವಾಲಾ ದಂಧೆಯ ಕರಾಳ ಮುಖ ಇದೆ. ಕೂಡಲೆ ಪ್ರಕರಣವನ್ನು ಸೈಬರ್ ಕ್ರೈಮ್ ವಿಭಾಗದಿಂದ ತನಿಖೆ ನಡೆಸಿದರೆ  ಇದರ ಹಿಂದೆ ಇರುವ ಕರಾಳ ಸತ್ಯ ಬಹಿರಂಗವಾಗಲಿ‌ದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ಕಾಂಗ್ರೆಸ್ ನಾಯಕರ ಪುಂಡಾಟಿಕೆ ಅವರ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಗೊಳಗಾದ ವಿಧ್ವತ್ ಬಿಜೆಪಿ ಕಾರ್ಯಕರ್ತ ಎಂಬ ಅಮಿತ್ ಶಾ ಹೇಳಿಕೆಗೆ ಕುಮಾರಸ್ವಾಮಿ ತೀರುಗೇಟು ನೀಡಿದ್ದು, ಬಿಜೆಪಿಯವರಿಗೆ ರಾಜ್ಯದಲ್ಲಿ ಮಾತನಾಡಲು ವಿಷಯಗಳಿಲ್ಲ. ಹೀಗಾಗಿ ಅವರು ಹಲ್ಲೆಗೊಳಗಾದ ಎಲ್ಲರನ್ನು ಬಿಜೆಪಿ ತನ್ನ ಕಾರ್ಯಕರ್ತರು ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.