ವಿದ್ಯಾರ್ಥಿಗಳೊಂದಿಗೆ ಶಾ ಸಂವಾದ : ಪತ್ರಕರ್ತರನ್ನು ಹೊರಕಳಿಸಿದ ಕಲ್ಲಡ್ಕ ಪ್ರಭಾಕರ ಭಟ್‌

ಮಂಗಳೂರು : ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಕರಾವಳಿಗೆ ಪ್ರಯಾಣ ಬೆಳೆಸಿದ್ದು, ಇಂದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವ ವೇಳೆ ಪತ್ರಕರ್ತರನ್ನು ಬಲವಂತದಿಂದ ಹೊರಹಾಕಿರುವ ಘಟನೆ ನಡೆದಿದೆ.

ರಾಷ್ಟದ ನವ ನಿರ್ಮಾಣ ಎಂಬ ವಿಷಯವಾಗಿ ಅಮಿತ್‌ ಶಾ ವಿದ್ಯಾರ್ಥಿಗಳೊಂದಿಗೆ ಮಾತನಾಡಬೇಕಿತ್ತು. ಅಲ್ಲದೆ ಕಾರ್ಯಕ್ರಮದ ಕುರಿತು ಸಂಘಟಕರು ಮೊದಲೇ ಮಾಹಿತಿ ನೀಡಿದ್ದರು. ಆದರೆ ಪತ್ರಕರ್ತರಿಗೆ ಅವಕಾಶವಿಲ್ಲ ಎಂಬ ಅಂಶವನ್ನು ಹೇಳಿರಲಿಲ್ಲ. ಆದ ಕಾರಣ ಅನೇಕ ಪತ್ರಕರ್ತರು ವರದಿಗಾರಿಕೆಗಾಗಿ ಸಭಾಂಗಣಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಕಾಲೇಜಿನ  ಸಂಘದ ಅದ್ಯಕ್ಷ ಕಲ್ಲಡ್ಕ ಪ್ರಭಾಕರ್‌ ಭಟ್‌ ಪತ್ರಕರ್ತರನ್ನು ಹೊರಹೋಗುವಂತೆ ಸೂಚಿಸಿದ್ದಾರೆ.

Leave a Reply

Your email address will not be published.