ಭಾರತೀಯ ಕ್ರಿಕೆಟ್ ನಲ್ಲಿ ವಿನೂತನ ದಾಖಲೆ : ಭುವಿ ಮಾಡಿದ ಸಾಧನೆಯೇನು..?

ಜೋಹಾನೆಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 28 ರನ್ ಜಯ ಗಳಿಸಿತು. 3 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆಯನ್ನು ಪಡೆದುಕೊಂಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ 4 ಓವರ್ ಎಸೆದು 24 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದರು.

ಈ ಮೂಲಕ ಭುವಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಹಿಂದೆ ಯಾರೂ ಮಾಡಿರದ ವಿನೂತನ ಸಾಧನೆಯೊಂದನ್ನು ಮಾಡಿದರು. ಟೆಸ್ಟ್ , ಏಕದಿನ ಹಾಗೂ ಟಿ20 ಮೂರು ಮಾದರಿಯ ಕ್ರಿಕೆಟ್ ನಲ್ಲಿ, ಒಂದೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದ ಭಾರತದ ಪ್ರಥಮ ಬೌಲರ್ ಎಂಬ ಖ್ಯಾತಿಗೆ ಭುವಿ ಪಾತ್ರರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com