ನಮ್ಮ CM ಪ್ರಧಾನಿಯಾಗಿದ್ರೆ ಕಳ್ಳ ದೇಶ ಬಿಡ್ತಿರಲಿಲ್ಲ, ಜೊತೆಗೇ ಪಾರ್ಟಿ ಮಾಡ್ತಿದ್ರು : ಪ್ರತಾಪ್‌ ಸಿಂಹ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪ್ರಧಾನಿಯಾಗಿದ್ದರೆ ಯಾವ ಕಳ್ಳನೂ ದೇಶ ಬಿಟ್ಟು ಹೋಗುತ್ತಿರಲಿಲ್ಲ. ಆದರೆ ಅವರೊಂದಿಗೆ ಕುಳಿತು ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು ಎಂದು ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯ ಮಾಡಿದ್ದಾರೆ.

ನೀರವ್‌ ಮೋದಿ ಕುರಿತು ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್‌ ಸಿಂಹ ಸಿದ್ದರಾಮಯ್ಯನವರೇ ನೀವು ಪ್ರಧಾನಿಯಾಗಿದ್ದರೆ ಯಾವ ಕಳ್ಳನೂ ದೇಶ ಬಿಟ್ಟು ಹೋಗುತ್ತಿರಲಿಲ್ಲ. ನಿಮ್ಮ ಜೊತೆಯೇ ನಾಟಿ ಕೋಳಿ ಸಾರು ತಿಂದು ಆರಾಮಾಗಿರುತ್ತಿದ್ದರು. ಅದಕ್ಕಾಗಿ ಹೈಕಮಾಂಡ್‌ಗೆ ಆಗಾಗ ಸೂಟ್‌ ಕೇಸ್‌ ಕಳಿಸಿಕೊಟ್ಟಿದ್ದರೆ ಸಾಕಿತ್ತು ಎಂದು ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಸೋನಿಯಾಗಾಂಧಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಅಯ್ಯೋ ಸಿದ್ದರಾಮಯ್ಯನವರೇ ಬ್ಯಾಂಕ್‌ಗಳಲ್ಲಿ 52 ಲಕ್ಷ ಕೋಟಿ ಎನ್‌ಪಿಎ ಆಗಿದ್ದು ನಿಮ್ಮ ಅಧಿನಾಯಕಿಯ ಕಾಲದಲ್ಲೇ. ಬಹಳಷ್ಟು ಮಂದಿ ಕಳ್ಳರು ಆಕೆಯ ಅಳಿಯ ರಾಬರ್ಟ್‌ ವಾದ್ರಾ ಜೊತೆ ಪಾರ್ಟಿ ಮಾಡಿಕೊಂಡು ಆರಾಮಾಗಿದ್ದರು. ಆದರೆ ದೇಶದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ದೇಶ ಬಿಟ್ಟು ಹೋಗುತ್ತಿರುವುದು ನಮ್ಮ ಮೋದಿಯ ಕಾಲದಲ್ಲಿ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com