ಪುಟ್ಟಣ್ಣಯ್ಯ ಅವರ ನಿಧನ ನಿಜಕ್ಕೂ ಆಘಾತ ತಂದಿದೆ : CM ಸಿದ್ದರಾಮಯ್ಯ

ರೈತ ನಾಯಕ ‌ಕೆ.ಎಸ್. ಪುಟ್ಟಣ್ಣಯ್ಯ ಅವರ ಹಠಾತ್ ನಿಧನ‌ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ ಪುಟ್ಟಣ್ಣಯ್ಯ ಅವರ ನಿಧನ ನಿಜಕ್ಕೂ ಆಘಾತ ತಂದಿದೆ ‘ ಎಂದು ಹೇಳಿದ್ದಾರೆ.

‘ ಮೊನ್ನೆ ಬಜೆಟ್ ಮಂಡನೆ ವೇಳೆ ನನ್ನನ್ನು ಭೇಟಿಯಾಗಿ ಕಂಗ್ರಾಟ್ಸ್ ಮಾಡಿ, ಚುನಾವಣೆಗೆ ತಯಾರಾಗುತ್ತಿದ್ದೇನೆ ಅಂತಾ ಹೇಳಿ ಹೋಗಿದ್ದರು. ನನಗೆ ಅವರು ಬಹಳ ವರ್ಷದ ಒಡನಾಡಿ. ನಾನು ಕೂಡ ರೈತಸಂಘದಲ್ಲಿದ್ದೆ, ಅವರು ಆಗಷ್ಟೇ ರೈತ ಸಂಘಕ್ಕೆ ಎಂಟ್ರಿ ಪಡೆದಿದ್ದರು, ಉತ್ತಮ ವಾಗ್ಮಿಯಾಗಿದ್ದ ಪುಟ್ಟಣ್ಣಯ್ಯ ಉತ್ತಮ ಕಬಡಿ ಪಟುವಾಗಿದ್ದರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.