Google search ನಲ್ಲಿ Sunny ಹಿಂದಿಕ್ಕಿದ ಪ್ರಿಯಾ ಪ್ರಕಾಶ್ ವಾರಿಯರ್ !

ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಸನ್ನಿ ಲಿಯೋನ್ ಅವರನ್ನು ಹಿಂದಿಕ್ಕಿ ಗೂಗಲ್ ನಲ್ಲಿ ಮೋಸ್ಟ್ ಸರ್ಚಿಂಗ್ ನಟಿ ಎನಿಸಿಕೊಂಡಿದ್ದಾರೆ! ಯೆಸ್. ಪ್ರಿಯಾ ಪ್ರಕಾಶ್ ಅವರ ಮುದ್ದಾದ ನಗು ಹಾಗೂ ವಿಂಕಿಂಗ್ ನಿಂದಾಗಿ ಮಲಯಾಳಂ ಚಿತ್ರ ‘ಒರು ಅದರ್ ಲವ್’ ನ ಹಾಡೊಂದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು.

ಹದಿನೆಂಟರ ವಯೋಮಾನದ ಪ್ರಿಯಾ ಒಂದೇ ದಿನದಲ್ಲಿ ದೇಶದಾದ್ಯಂತ ಹೆಸರಾಗಿದ್ದರು. ಗೂಗಲ್ ನಲ್ಲಿ ಅತ್ಯಂತ ಹೆಚ್ಚು ಹುಡುಕಾಟಕ್ಕೆ ಒಳಗಾಗುತ್ತಿದ್ದ ಸನ್ನಿ ಲಿಯೋನ್ ಅವರನ್ನೂ ಹಿಂದಿಕ್ಕಿದ ಪ್ರಿಯಾ ಗೂಗಲ್ ಸರ್ಚ್ ನ ಟಾಪ್ ನಟಿ ಎನಿಸಿದ್ದಾರೆ. ಪ್ರಿಯಾ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅವರನ್ನು ಸುಮಾರು ಮೂರು ಮಿಲಿಯನ್ ಗೆ ಹೆಚ್ಚು ಮಂದಿ ಹಿಂಬಾಲಿಸುತ್ತಿರುವುದು ಕಂಡಾಗ ನಟಿ ರಾತ್ರೋ ರಾತ್ರಿ ಅದೆಷ್ಟು ಮಟ್ಟಿಗೆ ಸಾಮಾಜಿಕ ತಾಣದ ಕೇಂದ್ರಬಿಂದುವಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com