ಚಿತ್ರ ನಿರ್ಮಾಣಕ್ಕಿಳಿದ ವೀರೇಂದ್ರ ಹೆಗ್ಗಡೆ, ಟಿ.ಎಸ್.ನಾಗಾಭರಣ ಚಿತ್ರಕ್ ನಿರ್ಮಾಪಕರ ದಂಡು..

ಇದು  ನಿಜ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಇಷ್ಟು ಮಂದಿ ನಿರ್ಮಾಪಕರಿಂದ ಒಂದು ಸಿನಿಮಾ ತಯಾರಾಗುತ್ತಿರುವುದು ಇದೇ ಮೊದಲು!
ಇಂಥ ದಾಖಲೆಯ ಸಿನಿಮಾ ಹೆಸರು ‘ಕಾನೂರಾಯಣ’. ಟಿ ಎಸ್ ನಾಗಾಭರಣ ನಿರ್ದೇಶನದ ಸಿನಿಮಾ ಇದು. ಸ್ಕಂದ ಅಶೋಕ್, ಸೋನು ಗೌಡ ಚಿತ್ರದ ಜೋಡಿ. ಉಳಿದಂತೆ ದೊಡ್ಡಣ್ಣ, ಗಿರಿಜಾ ಲೋಕೇಶ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ನೀನಾಸಂ ಅಶ್ವತ್ಥ್, ಮನು ಹೆಗ್ಗಡೆ, ಜಾನ್ಹವಿ ಜ್ಯೋತಿ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.


ಶೇಷ ಅಂದರೆ ಈ ಚಿತ್ರದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಸಿನಿಮಾ ಕ್ಷೇತ್ರಕ್ಕೆ ಬರುತ್ತಿದ್ದಾರೆ.
20 ಲಕ್ಷ ಮಂದಿ ನಿರ್ಮಾಪಕರು ಬೇರ‌್ಯಾರೂ ಅಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟದ ಸದ್ಯಸರು. ಧರ್ಮಸ್ಥಳದ ಸಾರಥ್ಯದಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಲಾಗಿದೆ.

ಇದರಲ್ಲಿ ಸದಸ್ಯರಾಗಿರುವವ 20 ಲಕ್ಷ ಮಂದಿಯೇ ‘ಕಾನೂರಾಯಣ’ ಚಿತ್ರದ ನಿರ್ಮಾಪಕರು. ಎಲ್ಲರು ವಂತಿಕೆ ರೂಪದಲ್ಲಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಒಂದು ಒಳ್ಳೆಯ ಉದ್ದೇಶದಿಂದ ಈ ಸಿನಿಮಾ ಮಾಡುತ್ತಿರುವ ಕಾರಣ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com