ನಿಮ್ಮ ಸಂಸದರು ಒಳ್ಳೆ ಕೆಲ್ಸ ಮಾಡ್ತಿದ್ದಾರೆ : ಪ್ರತಾಪ್‌ ಸಿಂಹ ಕೆಲಸಕ್ಕೆ ಮೋದಿಯಿಂದ ಶಹಬ್ಬಾಶ್‌ಗಿರಿ

ಮೈಸೂರು : ಸಂಸದ ಪ್ರತಾಪ್‌ ಸಿಂಹ ಅವರ ಕೆಲಸವನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡಿದ್ದು, ಪ್ರತಾಪ್‌ ಸಿಂಹ ಅವರಿಗೆ ಶಹಬ್ಬಾಶ್‌ ಗಿರಿ ನೀಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ನಿಮ್ಮ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ನಮ್ಮ ಬಳಿ ಬರುವಾಗ ಹೊಸ ಯೋಜನೆಯೊಂದನ್ನು ಯೋಚಿಸಿಯೇ ಬಂದಿರುತ್ತಾರೆ. ನಮ್ಮನ್ನು ಒಂದು ನಿಮಿಷ ಕೂರಲು ಬಿಡುವುದಿಲ್ಲ. ನಮ್ಮ ಜನರಿಗೆ ಆ ಕೆಲಸ ಮಾಡಿಕೊಡಿ, ಈ ಕೆಲಸ ಮಾಡಿಕೊಡಿ ಎನ್ನುತ್ತಲೇ ಇರುತ್ತಾರೆ. ಇಂತಹ ಸಂಸದರನ್ನು ಪಡೆದಿರುವುದು ಪುಣ್ಯ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ ಮೋದಿ, ರಾಜ್ಯದಲ್ಲಿ ಕಮಿಷನ್ ಸರ್ಕಾರವನ್ನು ಕಿತ್ತೊಗೆದು ಮಿಷನ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಕರ್ನಾಟಕದಲ್ಲಿ ಬಂಡಲ್‌ ಗಟ್ಟಲೆ ನೋಟು ಸಿಗುತ್ತಿವೆ. ಅವು ಎಲ್ಲಿಂದ ಸಿಗುತ್ತಿವೆಯೋ ಅರ್ಥವಾಗುತ್ತಿಲ್ಲ. ಇಂತಹ ವ್ಯಕ್ತಿಗಳಿಗ ಬೆಂಬಲಿಸಿದರೆ ನಿಮ್ಮೂರಿಗೇ ಕೆಟ್ಟ ಹೆಸರು ಬರುತ್ತದೆ. ಮೈಸೂರಿನಲ್ಲಿ ಹುಟ್ಟಿದ ವ್ಯಕ್ತಿ ಎಂದಿಗೂ ಮೋಸ ಮಾಡುವುದಿಲ್ಲ. ಆದರೆ ಬೆಂಗಳೂರಿಗೆ ಹೋಗುವ ಮಧ್ಯೆ ನೈತಿಕತೆ ಬಿಟ್ಟು ಹೋಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com