ಕಾಂಗ್ರೆಸಿಗರಿಗೆ ಅಧಿಕಾರ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ : ಮೋದಿ

ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಕನ್ನಡದಲ್ಲಿ ಭಾಷಣ ಆರಂಭ ಮಾಡಿದರು. ಮೈಸೂರಿನ ಜನತೆಗೆ ನಮಸ್ಕಾರ ಹೇಳಿದ ಮೋದಿ ತಾಯಿ ಚಾಮುಂಡೇಶ್ವರಿ, ನಾಲ್ವಡಿ, ವಿಶ್ವೇಶ್ವರಯ್ಯ, ಕುವೆಂಪು, ಸುತ್ತೂರು ಶ್ರೀ ಗೆ ನಮನ ಸಲ್ಲಿಸಿದರು. ಮೈಸೂರು ಪೇಟ ಜಗತ್ ಪ್ರಸಿದ್ಧಿ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು, ಚಾಮುಂಡೇಶ್ವರಿ ಮಾತೆಗೆ ಪ್ರಣಾಮಗಳು, ಮೈಸೂರಿನ‌ ಅರಸರು, ಕುವೆಂಪು, ಸರ್.ಎಂ.ವಿಶ್ವೇಶ್ವರಯ್ಯ, ಸುತ್ತೂರು ಶ್ರೀಗಳು, ಬಾಲಗಂಗಾಧರಸ್ವಾಮಿಗಳಿಗೆ ಪ್ರಣಾಮಗಳು. ಮೈಸೂರು ರೇಷ್ಮೆ,ಶ್ರೀಗಂಧ,ಮೈಸೂರು ಮಲ್ಲಿಗೆ,ಮೈಸೂರುಪಾಕ್ ಇವೆಲ್ಲಾ ಜಗತ್ ಪ್ರಸಿದ್ದವಾಗಿವೆ.

ಇಂದು ಬೆಂಗಳೂರು-ಮೈಸೂರು ರೈಲ್ವೆ ವಿದ್ಯುದ್ದೀಕರಣ, ಮೈಸೂರು-ಉದಯಪುರ ಮೈಸೂರು ಕ್ವೀನ್ ರೈಲು ಲೋಕಾರ್ಪಣೆ ಮಾಡಿದ್ದೇವೆ. ರೈಲ್ವೆ ಆಧುನೀಕರಣ, ರೈಲ್ವೆ ಪ್ರಗತಿಯ ತೀವ್ರಗತಿಗೆ ಆದ್ಯತೆ ನೀಡಿದ್ದೇವೆ. ರೈಲ್ವೆ ಲೈನ್ ಡಬ್ಬಲ್ಲಿಂಗ್ ಅದರ ಒಂದು ಭಾಗ‌.ಬಡವರ ಅಭ್ಯುದಯಕ್ಕೆ ರೈಲ್ವೆ ಪ್ರಗತಿ ಅಗತ್ಯ. ನಾಲ್ಕು ವರ್ಷದಿಂದ ರೈಲ್ವೆ ಯೋಜನೆಗಳು ತೀವ್ರಗತಿ ಪಡೆದುಕೊಂಡಿದೆ.

ಹಿಂದಿನ‌ಸರ್ಕಾರಗಳು ಜನರ ಕಣ್ಣಿಗೆ ಮಣ್ಣೆರೆಚಿವೆ. ಹಿಂದೆ ಇಷ್ಟೊಂದು ಮೀಡಿಯಾ, ಎನ್ ಆರ್ ಐ ಮೊದಲಾದವು ಇರಲಿಲ್ಲ. ಅವರನ್ನು ಹೇಳುವವರು ಕೇಳುವವರು ಇರಲಿಲ್ಲ. ರೈಲ್ವೆ ಬಜೆಟ್ ನಲ್ಲಿ ಘೋಷಣೆಯಾಗಿದ್ದ 9 ಲಕ್ಷ ರೂ ಗಿಂತ ಹೆಚ್ಚು ಮೌಲ್ಯದ 15,00 ಯೋಜನೆಗಳು ಜಾರಿಯೇ ಆಗಿರಲಿಲ್ಲ.

ಹಾಗಾಗಿಯೇ ಪ್ರತ್ಯೇಕ ರೈಲ್ವೆ ಬಜೆಟ್ ರದ್ದು ಮಾಡಿ, ಆಗ ಘೋಷಣೆಯಾಗಿದ್ದ ರೈಲ್ವೆ ಯೋಜನೆಗಳನ್ನು ಹುಡುಕಿ ಜಾರಿಗೊಳಿಸುತ್ತಿದ್ದೇವೆ. ಮೈಸೂರು-ಉದಯಪುರ ನಡುವಿನ ರೈಲ್ವೆ ಯೋಜನೆ ಜಾರಿ ಎಂದರೆ ಕರ್ನಾಟಕ ಮತ್ತು ರಾಜಾಸ್ತಾನ ನಡುವೆ ನೇರ ಸಂಪರ್ಕ ಕಲ್ಪಿಸಿದಂತೆ. ಇದರಿಂದ ಎರಡೂ ಕಡೆಯ ಪ್ರವಾಸೋದ್ಯಮ ಅಭಿವೃದ್ಧಿ ಯಾಗುತ್ತದೆ

ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಟೂರಿಸಂ ನಿಂದ ರಿಕ್ಷಾವಾಲ, ಟ್ಯಾಕ್ಸಿವಾಲ, ಹೊಟೇಲ್ ನಿರ್ವಾಹಕ, ದೇವಸ್ಥಾನದ ಹೊರಗೆ ಪೂಜಾಸಾಮಗ್ರಿ ಮಾರುವವರು ಸೇರಿದಂತೆ ಸಣ್ಣಪುಟ್ಟ ಉದ್ಯೋಗ ಮಾಡುವವರ ಆದಾಯ ಹೆಚ್ಚಿಸುತ್ತದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ ಮೋದಿ ‘ ಕರ್ನಾಟಕದಲ್ಲಿರುವ ಸರ್ಕಾರ ಎಷ್ಟು ದಿನ ಹೆಚ್ಚಿರುತ್ತದೋ ಅಷ್ಟು ದಿನ‌ ಕರ್ನಾಟಕವನ್ನು ದೀವಾಳಿ ಮಾಡುತ್ತಿರುತ್ತದೆ. ಸಂವಿಧಾನದ ಅನುಸಾರ ನಡೆಯುವುದು ಪ್ರತಿಯೊಬ್ಬರ ಕರ್ತವ್ಯ ಆದರೆ ಇಲ್ಲಿ ಬೇರೆ ರೀತಿಯಲ್ಲಿ ಆಗುತ್ತದೆ

ನಾನು ಇಲ್ಲಿನ ಮುಖ್ಯಮಂತ್ರಿ ಹಾಗೂ ಅವರ ಪಕ್ಷವನ್ನು ಕೇಳಲು ಬಯಸುತ್ತೇನೆ. ಕಳೆದ ಅರವತ್ತು ವರ್ಷಗಳಿಂದ ನಿಮ್ಮ ಪಕ್ಷವೇ ಅಧಿಕಾರದಲ್ಲಿತ್ತು. ಈಗ ಜನರನ್ನು ಉದ್ರೇಕಿಸುವ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಲ್ಲ. ಐವತ್ತು ವರ್ಷಗಳಿಂದ ನಿಮ್ಮ ಬಾಯಿಗೆ ಬೀಗ ಹಾಕಿ ಕೂತಿದ್ದೇಕೆ..? ಇಂತಹಾ ಪಕ್ಷವನ್ನು ನಂಬಬಹುದೇ…ಕರ್ನಾಟಕಲ್ಲಿ ಸಣ್ಣ ಮನಸ್ಸಿನ ಜನ ಅಧಿಕಾರದಲ್ಲಿದ್ದಾರೆ. ಅವರಿಗೆ ಖುರ್ಚಿ ಮುಖ್ಯವೇ ಹೊರತು ಕರ್ನಾಟಕದ ಅಭಿವೃದ್ಧಿ ಯಲ್ಲ.

Leave a Reply

Your email address will not be published.