ಮೈಸೂರಿಗೆ ಪುಟ್ಟಣ್ಣಯ್ಯ ಪಾರ್ಥಿವ ಶರೀರ : ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ರೈತ ಮುಖಂಡ ಕೆ ಎಸ್ ಪುಟ್ಟಣ್ಣಯ್ಯ ಅವರ ಮೃತದೇಹ ಮೈಸೂರಿಗೆ ಆಗಮಿಸಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಪಾರ್ಥೀವ ಶರೀರವನ್ನು ಸಾಗಿಸಲಾಗಿದೆ. ಪಾರ್ಥೀವ ಶರೀರವನ್ನು ಮಂಗಳವಾರ ಸಂಜೆತನಕ ಕೆ.ಆರ್ ಆಸ್ಪತ್ರೆಯಲ್ಲಿ ಇಡಲಾಗುವುದು.

ಬಳಿಕ ಬುಧವಾರ ಪುಟ್ಟಣ್ಣಯ್ಯ ಅವರ ಸ್ವ ಗ್ರಾಮವಾದ ಕ್ಯಾತನಹಳ್ಳಿಗೆ ಮೃತದೇಹ ತೆರಳಲಿದೆ. ಮಕ್ಕಳು ವಿದೇಶದಲ್ಲಿ ಇರುವ ಕಾರಣ, ಅವರು ಬಂದು ಅಂತಿಮ ದರ್ಶನ ಪಡೆದ ನಂತರವೇ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com