ಆಸ್ತಿಗಾಗಿ ತೆಲಗಿ ಸಹೋದರರ ಕಿತ್ತಾಟ : ತೆಲಗಿ ಪತ್ನಿ, ಮಗಳ ಮೇಲೆ ಹಲ್ಲೆ

ಬಹುಕೋಟಿ ನಕಲಿ ಛಾಪಾ ಕಾಗಾದ ಪ್ರಕರಣದ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಮೃತಪಟ್ಟು ಅನೇಕ ತಿಂಗಳು ಕಳೆದಿವೆ. ಆದರೇ ಕುಟುಂಬಸ್ಥರ ಆಸ್ತಿಗಾಗಿ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ. ಆಸ್ತಿಗಾಗಿ ತೆಲಗಿ ಸಹೋದರರು ಜಗಳವಾಡಿದ್ದು ತೆಲಗಿ ಪತ್ನಿ ಶಹೀದಾ, ಮಗಳು ಸನಾ ಮೇಲೆ ಹಲ್ಲೆ ನಡೆಸಿದ್ದಾರೆ.

ಶಹೀದಾ ಈಗಾಗಲೇ ಪತಿಯ ಛಾಪಾಕಾಗದ ವ್ಯವಹಾರದಿಂದ ಬಂದ ಹಣವನ್ನು ಕೋರ್ಟ್ ಒಪ್ಪಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪುಣೆ ಕೋರ್ಟ್ ಅರ್ಜಿವೊಂದನ್ನು ಸಹ ಸಲ್ಲಿಸಿದ್ದಾರೆ. ಇದು ತೆಲಗಿ ಸಹೋದರ ಅಜೀಂ, ರಹಿಂ ಹಾಗೂ ಅವರ ಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ. ನಿನ್ನೆ ಸಂಜೆ ವೇಳೆಯಲ್ಲಿ ಈ ವಿಚಾರ ಸಂಬಂಧ ಮನೆಯಲ್ಲಿ ಗಲಾಟೆ ನಡೆದಿದೆ.

ಅಜೀಂ, ರಹೀಂ ಹಾಗೂ ಆತನ ಮಕ್ಕಳು ಗರ್ಭಿಣಿ ಸನಾಳ ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸನಾ, ಶಹೀದಾ ತೆಲಗಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜತೆಗೆ ಇಂದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.

Leave a Reply

Your email address will not be published.