ಜಮಖಂಡಿ : JDS ಅಭ್ಯರ್ಥಿ ಕಚೇರಿಗೆ ವಾಮಾಚಾರ : ನಿಂಬೆಹಣ್ಣು, ಕುಂಕುಮ ಕಟ್ಟಿದ ಕಿಡಿಗೇಡಿಗಳು

ಜಮಖಂಡಿಯ ಜೆಡಿಎಸ್ ಅಭ್ಯರ್ಥಿ ತೌಫೀಕ್ ಪಾರ್ಥನಳ್ಳಿ ಅವರ ಕಚೇರಿಗೆ ವಾಮಾಚಾರ ಮಾಡಲಾಗಿದೆ. ದುಷ್ಕರ್ಮಿಗಳು ಕಚೇರಿಯ ಶೆಟರ್ಸ್ ಗೆ ನಿಂಬೆ ಹಣ್ಣು, ಕುಂಕುಮ ಕಟ್ಟಿದ್ದಾರೆ.

ತೌಫಿಕ್ ತಮ್ಮ ಕಚೇರಿಯನ್ನ ಜೆಡಿ ಎಸ್ ಕಚೇರಿ ಎಂದು ಮಾರ್ಪಡಿಸುತ್ತಿದ್ದರು. ವಾಮಾಚಾರದೊಂದಿಗೆ ಕಿಡಿಗೇಡಿಗಳು ಪತ್ರವನ್ನೂ ಕೂಡ ಬರೆದಿಟ್ಟು ಹೋಗಿದ್ದಾರೆ. ನಿಮ್ಮ ರಾಜಕೀಯ ಭವಿಷ್ಯ ನಮ್ಮ ಕೈಯಲ್ಲಿದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಹೆಸರು ಕೆಟ್ಟು ಹೋಗುತ್ತದೆ. ಇದು ಮೊದಲ ವಿಷಯ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪತ್ರದ ಮೂಲಕ ರಾಜಕೀಯದಿಂದ ಹಿಂದೆ ಸರಿಯುವಂತೆ ಪರೋಕ್ಷ ಬೆದರಿಕೆ ಒಡ್ಡಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿದ್ದರು. ಜೆಡಿಎಸ್ ನಲ್ಲಿನ ಭಿನ್ನಮತದ ಗುಂಪು ಕೃತ್ಯಗೈದಿರುವ ಶಂಕೆ ವ್ಯಕ್ತವಾಗಿದೆ. ಜೆಡಿಎಸ್ ನಲ್ಲಿ ಟಕೆಟ್ ಗಾಗಿ ಬೇರೆ ಬೇರೆ ಆಕಾಂಕ್ಷಿಗಳಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com