3ನೇ ಇನ್ನಿಂಗ್ಸ್‌ ಶುರು ಮಾಡಿದ ಪಾಕ್‌ ಮಾಜಿ ಕ್ರಿಕೆಟರ್‌ : ಮತ್ತೆ ಮದುವೆಯಾದ ಇಮ್ರಾನ್‌ ಖಾನ್‌

ಇಸ್ಲಾಮಾಬಾದ್‌ : ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ಹಾಗೂ ತೆಹ್ರಿಕ್‌ ಇ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರು ಮೂರನೇ ಮದುವೆಯಾಗಿದ್ದು, ಈ ಬಗ್ಗೆ ಪಕ್ಷದ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಧಾರ್ಮಿಕ ಸಲಹೆಗಾರ್ತಿ ಬುಶ್ರಾ ಮನೇಕಾ ಅವರನ್ನು ಇಮ್ರಾನ್‌ ಖಾನ್‌ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆ ಬಹಳ ಸರಳವಾಗಿ ನಡೆದಿದ್ದು, ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಅವರ ಆಪ್ತರಷ್ಟೇ ಹಾಜರಿದ್ದರು. ಇಮ್ರಾನ್‌ ಖಾನ್‌ ಮದುವೆ ಸುದ್ದಿ ಬಹಿರಂಗವಾಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಹಿಂದೆ ಬುಶ್ರಾ ಮನೇಕಾ(40) ಇಸ್ಲಾಮಾಬಾದ್‌ನ ಹಿರಿಯ ಕಸ್ಟಮ್‌ ಅಧಿಕಾರಿಯೊಬ್ಬರನ್ನು ಮದುವೆಯಾಗಿದ್ದರು. ಬಳಿಕ ಆತನಿಂದ ವಿಚ್ಛೇದನವನ್ನು ಪಡೆದು ಬೇರೆಯಾಗಿ ಬದುಕುತ್ತಿದ್ದರು. ಕೆಲ ತಿಂಗಳ ಹಿಂದೆ ಇಮ್ರಾನ್‌ ಖಾನ್‌ ಹಾಗೂ ಬುಶ್ರಾ ಭೇಟಿಯಾಗಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರಿದ್ದು, ಇಮ್ರಾನ್‌ ಖಾನ್‌ ಮದುವೆ ಬಗ್ಗೆ ಗುಸು ಗುಸು ಶುರುವಾಗಿತ್ತು. ಆದರೆ ಇದೆಲ್ಲವನ್ನೂ ಇಮ್ರಾನ್‌ ನಿರಾಕರಿಸಿದ್ದರು.

ಇಮ್ರಾನ್ ಖಾನ್‌ಗೆ ಇದು ಮೂರನೇ ವಿವಾಹವಾಗಿದ್ದು, 1995ರಲ್ಲಿ ಮೊದಲ ಬಾರಿಗೆ ಜೆಮಿಯಾ ಅವರ ಜೊತೆ ಮದುವೆಯಾಗಿತ್ತು. 9 ವರ್ಷದ ಬಳಿಕ ಜೆಮಿಯಾಗೆ ವಿಚ್ಛೇದನ ನೀಡಿದ್ದರು. ಬಳಿಕ ರೆಹಾಮ್‌ ಎಂಬುವವರನ್ನು ಮದುವೆಯಾಗಿ 10 ತಿಂಗಳಲ್ಲೇ ವಿಚ್ಛೇದನ ನೀಡಿದ್ದರು. ಈಗ ಮತ್ತೊಬ್ಬರನ್ನು ಮದುವೆಯಾಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com