CM ಸಿದ್ದರಾಮಯ್ಯ ಅವರದ್ದು ಕಡು ಭ್ರಷ್ಟ ಸರಕಾರ : ಬಿಎಸ್ ವೈ ವಾಗ್ದಾಳಿ

ಮೈಸೂರಿನಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲೇ ಸಿದ್ದ ಪಡಿಸಿದ ಭಾಷಣ ಓದಿದರು. ‘ ರಾಜ್ಯವನ್ನು ನೀವು ಬಿಜೆಪಿಗೆ ನೀಡಬೇಕು. ಮೈಸೂರಿಗೆ ಮೋದಿ ಹಲವು ಯೋಜನೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಛೀಮಾರಿ ಹಾಕಿದೆ ‘ ಎಂದ ಬಿಎಸ್ ವೈ ರಾಜ್ಯ ಸರ್ಕಾರ ಕಡು ಭ್ರಷ್ಟ ಸರ್ಕಾರ ಎಂದರು.

ಸಮಾಜವಾದಿ ಸಿಎಂ ಸಿದ್ದರಾಮಯ್ಯ ದೇಶದ ಐದನೇ ಶ್ರೀಮಂತ ಸಿಎಂ ಆಗಿದ್ದಾರೆ. ಅಪರಾಧ ಪಟ್ಟಿಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನವಿದೆ. ಸರ್ಕಾರ ಅನ್ನದಾತನ ಕೈ ಬಿಟ್ಟಿದೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಬಲ ಪಡಿಸಬೇಕು. ರಾಜ್ಯದಲ್ಲಿ ಪ್ರಧಾನಿಯವರು ಕನಸು ಕಂಡಿರುವ ೧೫೦ ಸ್ಥಾನ ಪಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com