ವಿಜಯಪುರ : ಬೈಕ್ ಮೇಲೆ ಹೊರಟಾಗ ಮುರಿದು ಬಿದ್ದ ಮರ : ಮಹಿಳೆ ಸಾವು

ವಿಜಯಪುರ : ಗಂಡ ಹೆಂಡತಿ ಬೈಕ್ ಮೇಲೆ ಹೊರಟಿದ್ದ ವೇಳೆ ಏಕಾಏಕಿ ಮರದ ಕೊಂಬೆ ಮುರಿದು ಬಿದ್ದು ಪತ್ನಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪತಿಗೆ ಗಂಭೀರ ಗಾಯವಾಗಿದೆ. ವಿಜಯಪುರ ತಾಲೂಕಿನ ತಿಕೋಟಾ ಬಳಿ ಘಟನೆ ನಡೆದಿದೆ.

ವಿಜಯಪುರ ನಿವಾಸಿ ಬೇಬಿಜಾನ್ ಮುಲ್ಲಾ(36) ಸಾವನ್ನಪ್ಪಿದ್ದು, ಪತಿ ಮಹೆಬೂಬ್ ಗೆ ಗಾಯಗಳಾಗಿವೆ. ಗಾಯಾಳು ಮಹೆಬೂಬ್ ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಜಯಪುರದಿಂದ ಕನಮಡಿಗೆ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com