ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಳ : ಉಜ್ಜಯಿನಿ ಜಗದ್ಗುರು ಕಳವಳ

ಗದಗ : ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಉಜ್ಜಯಿನಿ ಜಗದ್ಗುರುಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸಿಂಗಟಾಲೂರ ಬಳಿಯ ಕಪ್ಪತಗುಡ್ಡ ತಪ್ಪಲಿನಲ್ಲಿ ನೂತನ ವೀರಭದ್ರೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ‘ ಈ ಹಿಂದೆ ಪತ್ನಿ ಬಿಟ್ಟು ಉಳಿದೆಲ್ಲ ಮಹಿಳೆಯರನ್ನು ತಾಯಿ, ಅಕ್ಕ, ತಂಗಿ ಅನ್ನೋ ಭಾವವವಿತ್ತು.

‘ ಆದರೆ ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಪತ್ರಿಕೆಗಳು ನೋಡಿದ್ರೆ ಸಾಕು ಅತ್ಯಾಚಾರ ಸುದ್ದಿಗಳು ರಾರಾಜಿಸುತ್ತವೆ. ಹೀಗಾಗಿ ನಿಮ್ಮ ಮನೆಯ ಹೆಣ್ಣುಮಕ್ಕಳು, ಮಹಿಳೆಯರು ಹೇಗೆ ಸುರಕ್ಷಿತವಾಗಿ ಇರಬೇಕು ಅನ್ನೋ ಭಾವ ನಿಮಗೆ ಇರುತ್ತೋ. ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳು ಚೆನ್ನಾಗಿರಲಿ ಅನ್ನೋ ಭಾವನೆ ಎಲ್ಲರಲ್ಲಿ ಇರಲಿ. ಜನರಲ್ಲಿ ವಿಕೃತ ಮನಸ್ಸು ಕಡಿಮೆಯಾಗಲಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com