WATCH : ಪ್ರಿಯಾ ಕಣ್ಣೋಟಕ್ಕೆ ಬೋಲ್ಡ್ ಆದ ಆಫ್ರಿಕಾ ಬೌಲರ್ Lungi Ngidi..!

ಮಲಯಾಳಮ್ ಚಿತ್ರ ‘ಒರು ಅದರ್ ಲವ್’ ಚಿತ್ರದ ‘ ಮಾಣಿಕ್ಯ ಮಲರಾಯ ಪೂವಿ ‘ ಹಾಡಿನ ಮಾದಕ ಕಣ್ಣೋಟ, ಅಭಿನಯದ ಮೂಲಕ ಪ್ರಿಯಾ ಪ್ರಕಾಶ್ ವಾರಿಯರ್ ದೇಶದ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಹಾಡು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ 18 ವರ್ಷದ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಫೇಮಸ್ ಆಗಿಬಿಟ್ಟಿದ್ದಾರೆ.

ಪ್ರಿಯಾ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.  ಭಾರತದ ಟ್ವಿಟರ್ ಬಳಕೆದಾರರೊಬ್ಬರು, ಎಡಿಟ್ ಮಾಡಲಾಗಿರುವ ವಿಡಿಯೋ ಒಂದನ್ನು ಆಫ್ರಿಕಾ ಬೌಲರ್ ಲುಂಗಿ ಎಂಗಿಡಿ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಪ್ರಿಯಾ ವಾರಿಯರ್ ಕಣ್ಣೋಟಕ್ಕೆ ಲುಂಗಿ ಎಂಗಿಡಿ ನಾಚಿ ನೀರಾಗುತ್ತಿರುವಂತೆ ತೋರಿಸಲಾಗಿದೆ. ಆಶ್ಚರ್ಯವೆಂದರೆ, ಈ ವಿಡಿಯೋವನ್ನು ವೀಕ್ಷಿಸಿರುವ ಲುಂಗಿ, ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಕೇವಲ ತಮಾಷೆ ಮಾಡಲು ತಯಾರಿಸಲಾಗಿರುವ ವಿಡಿಯೋವನ್ನು ಲುಂಗಿ ರಿಟ್ವೀಟ್ ಮಾಡಿದ್ದು ‘ ವ್ಯಾಲಂಟೈನ್ಸ್ ಡೇ ಡನ್ ‘ ಎಂದು ಬರೆದುಕೊಂಡಿದ್ದಾರೆ. ಲುಂಗಿ ಎಂಗಿಡಿ ನೀಡಿರುವ ಪ್ರತಿಕ್ರಿಯೆಯಿಂದ ರೋಮಾಂಚನಗೊಂಡಿರುವ ಅಭಿಮಾನಿಗಳು ಆಫ್ರಿಕಾ ಬೌಲರ್ ಹಾಸ್ಯಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com