UB ಸಿಟಿ ದಾಂಧಲೆ ಪ್ರಕರಣ : ಯೂತ್ ಕಾಂಗ್ರೆಸ್ ನಿಂದ ಹ್ಯಾರಿಸ್ ಪುತ್ರನ ವಜಾ

ತುಮಕೂರು : ಶಾಸಕ ಹ್ಯಾರೀಸ್ ಪುತ್ರನ ದಾಂಧಲೆ ಪ್ರಕರಣದ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಯೂತ್ ಕಾಂಗ್ರೆಸ್ನಿಂದ ಹ್ಯಾರಿಸ್ ಮಗನನ್ನು ವಜಾಗೊಳಿಸಲಾಗಿದೆ. ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಗೊಳಿಸಲಾಗಿದೆ. 6 ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದನೂ ವಜಾಗೊಳಿಸಲಾಗಿದೆ.

‘ ಸಾರ್ವಜನಿಕ ಸ್ಥಾನದಲ್ಲಿ ಇರೋರು ಈ ರೀತಿ ಮಾಡಬಾರದು. ಅವರ ತಂದೆ ಶಾಸಕರಾಗಿರೋದನ್ನು ಮರೆತು ಪುತ್ರ ಈ ರೀತಿ ಮಾಡಿರೋದು ಸರಿಯಲ್ಲ. ಈ ಘಟನೆಯಿಂದ ಹ್ಯಾರಿಸ್ ಕೂಡಾ ಪಶ್ಚಾತ್ತಾಪ ಪಟ್ಟಿದ್ದಾರೆ. ಪೊಲೀಸರು ಈಗಾಗಲೇ ಕಾನೂನು ರಿತ್ಯ ಕ್ರಮ ಕೈಗೊಂಡಿದ್ದಾರೆ ‘ ಎಂದು ಹೇಳಿದ್ದಾರೆ.

ಕನ್ನಡದ ಕುರಿತು ಅನಂತಕುಮಾರ್ ಹೆಗಡೆ ಹೇಳಿಕೆ‌ ವಿಚಾರವಾಗಿ ಮಾತನಾಡಿದ ಅವರು ‘ ಕೇಂದ್ರದ ಮಂತ್ರಿಯಾಗಿದ್ದಾರೆ. ಯಾವ ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ. ಕನ್ನಡ ಕಲಿಸಲು ಮುಂದಾಗಲಿ ‘ ಎಂದು ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com