ಗದಗ : ಸಾಲ ಬಾಧೆ ತಾಳಲಾಗದೆ ಆತ್ಮಹತ್ಯೆಗೆ ಶರಣಾದ ರೈತ….

ಗದಗ : ಸಾಲಬಾಧೆ ತಾಳಲಾರದೇ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ.  ಸುರೇಶಗೌಡ ಪರ್ವತಗೌಡ ಚವ್ಹಾಣಗೌಡ್ರ.(೪೫) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸವದತ್ತಿ ತಾಲೂಕಿನ ಹಳಕಟ್ಟಿ ಗ್ರಾಮದವನಾದ ಮೃತ ವ್ಯಕ್ತಿ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಕೆವಿಜಿ ಬ್ಯಾಂಕ್ ನಲ್ಲಿ 2 ಲಕ್ಷ ಬೆಳೆ ಸಾಲ ಮಾಡಿದ್ದರು. ಕಳೆದ ೩ ವರ್ಷದಿಂದ ಸಾಲ ಮಾಡಿದ್ದ ಸುರೇಶ್ ಗೌಡ, ಹಳಕಟ್ಟಿ ಗ್ರಾಮದಲ್ಲಿ 31 ಎಕರೆ ಜಮೀನು ಹೊಂದಿದ್ದರು.

ನರಗುಂದ ಹೊರವಲಯದ ಹಳ್ಳದಲ್ಲಿ ಘಟನೆ ನಡೆದಿದೆ. ಗದಗ ಜಿಲ್ಲೆಯ ನರಗುಂದ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.