ಅಂತ್ಯಕ್ರಿಯೆಗೆಂದು ಹೊರಟಿದ್ದಾಗ ರಸ್ತೆ ಅಪಘಾತ : ಒಂದೇ ಕುಟುಂಬದ ಐವರ ಸಾವು

ಚಿಕ್ಕೋಡಿ : ಸಂಬಂಧಿಕರ ಅಂತ್ಯಕ್ರಿಯೆಗೆಂದು ತೆರಳುವ ವೇಳೆ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಬೆಳಗಾವಿಯ ಅಥಣಿ ತಾಲ್ಲೂಕಿನಲ್ಲಿ ನಡೆದಿದೆ.

ಮೃತರನ್ನು ಅಣ್ಣಪ್ಪ ಜಾದವ್, ಅರ್ಚನಾ ಜಾದವ್‌, ರಾಧಮ್ಮ ಜಾದವ್‌, ರವಿ ಜಾದವ್‌ ಹಾಗೂ ಗೈರವ್ವ ಜಾದವ್‌ ಎಂದು ಹೆಸರಿಸಲಾಗಿದೆ. ಮೃತರು ಅಥಣಿ ತಾಲ್ಲೂಕಿನ ಕಕಮರಿ ಮೂಲದವರೆಂದು ತಿಳಿದುಬಂದಿದೆ. ಅಪಘಾತದಲ್ಲಿ  8ಕ್ಕೂ ಅದಿಕ ಮಂದಿಗೆ ಗಂಭೀರ ಗಾಯಗಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಬಂಧಿಕರೊಬ್ಬರು ಸಾವಿಗೀಡಾಗಿದ್ದು, ಅವರ ಅಂತ್ಯಕ್ರಿಯೆಗೆಂದು 16 ಮಂದಿ ಕ್ರೂಸರ್‌ನಲ್ಲಿ ಹೊರಟಿದ್ದರು. ಈ ವೇಳೆ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ ಗೆ ಕ್ರೂಸರ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸ್ಥಳಕ್ಕೆ ಐಗಳಿ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com