ಯೋಗಿ ಆದಿತ್ಯನಾಥ್‌ ಸರ್ಕಾರದಿಂದ ಮದರಸಾಗಳ ಅಭಿವೃದ್ಧಿಗೆ 404 ಕೋಟಿ ರೂ…!

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ 2018ರ ಬಜೆಟ್ ಘೋಷಿಸಿದ್ದು, ಮದರಸಾಗಳ ಅಭಿವೃದ್ದಿಗೆ 404 ಕೋಟಿ ರೂ ಘೋಷಿಸಿದ್ದಾರೆ. ಕಳೆದ ಬಾರಿ ಅಲ್ಪಸಂಖ್ಯಾತರಿಗೆ ನೀಡಿದ ಅನುದಾನಕ್ಕಿಂತಲೂ ಈ ಬಾರಿ ಶೇ.10 ರಷ್ಟು ಹೆಚ್ಚಿಗೆ ಅಂದರೆ 2,757 ಕೋಟಿ ರೂ ಅನುದಾನ ನೀಡಲಾಗಿದೆ.

ಉತ್ತರ ಪ್ರದೇಶದ ಮದರಸಾಗಳಲ್ಲಿ NCERT ಪಠ್ಯಕ್ರಮ ಹಾಗೂ ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ  ಬೋಧಿಸುವಂತೆ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಮದರಸಾಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಲು ಇದರಿಂದ ಸಹಕಾರಿಯಾಗಿದೆ. ಆಧುನಿಕ ಶಿಕ್ಷಣವನ್ನು ಮಕ್ಕಳಿಗೆ ಕಲ್ಪಿಸಲು ಈ ಹಣವನ್ನು ಬಳಸಿಕೊಳ್ಳುವುದಾಗಿ ಮದರಸಾ ಮುಖ್ಯಸ್ಥ ಮೊಹಮದ್‌ ಫಾರೂಕ್‌ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com