ರಾಹುಲ್ ದೇವಸ್ಥಾನಕ್ಕೆ ಹೋದರೆ BJP ಯವರಿಗೇಕೆ ಹೊಟ್ಟೆ ಉರಿ..? : ರಾಮಲಿಂಗಾ ರೆಡ್ಡಿ

ಬೆಳಗಾವಿ : ಕೇಸರಿ ನಾಯಕರ ವಿರುದ್ದ ಹೋಮ್ ಮಿನಿಸ್ಟರ್ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದು ರಾಹುಲ್ ಟೆಂಪಲ್ ರನ್ ಬಗ್ಗೆ ಖೋಟಾ ಹಿಂದೂಗಳು ಹುಟ್ಟಿಕೊಂಡಿದ್ದಾರೆಂದ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

‘ ರಾಹುಲ್ ಗಾಂಧಿ ಅವರಜ್ಜಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ದೇವಸ್ಥಾನಕ್ಕೆ ಹೋಗಿದ್ದಾರೆ. ಗಾಂಧಿ ಕುಟುಂಬ ಕರ್ನಾಟಕಕ್ಕೆ ಬಂದಾಗ ಹಿಂದೂ ದೇವಸ್ಥಾನಕ್ಕೆ ಹೋಗಿದ್ದಾರೆ. ಬಿಜೆಪಿಯವರು ಹಿಂದುತ್ವವನ್ನ ಗುತ್ತಿಗೆ ಪಡೆದಿದ್ದಾರಾ..? ‘ ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದ್ದಾರೆ.

‘ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋದ್ರೆ ಬಿಜೆಪಿಯವರಿಗೆ ಯಾಕೇ ಹೊಟ್ಟೆಯುರಿ. ಬಿಜೆಪಿಯವರು ರಾಜಕೀಯ ಮಾಡುವದನ್ನ ಬಿಟ್ಟು ಜನರ ಕೆಲ್ಸಾ ಮಾಡ್ಲಿ. ಜಾತಿ ಜಾತಿ, ಧರ್ಮ ಧರ್ಮ ಮಧ್ಯೆ ಜಗಳಾ ತಂದಿಡುವುದು ಬಿಡ್ಲಲಿ.

ಗೌರಿ ಹತ್ಯೆ ಕೇಸ ಅಲ್ಲಿ ನಾವು ಎಸ.ಐ.ಟಿ ಮಾಡಿದ್ದೇವೆ. ನಮಗೆ ಹಂತಕರ ಸುಳಿವಿದೇ ಎಲ್ಲಾ ಸಾಕ್ಷಿ ಪಕ್ಕಾ ಮಾಡಿಕೊಂಡು ಆರೋಪಿಗಳನ್ನ ಬಂಧಿಸಲಾಗುವುದು. ನಾವು ದಾಬೋಲಕರ, ಪಾನ್ಸಾರೆ ಕೇಸಿನಲ್ಲಿ ತಾವುಡೆ ಸಾಕ್ಷಿಯಿಲ್ಲದೇ ಬಿಡುಗಡೆಯಾದರು. ನಾವು ಗೌರಿ ಕೇಸಿನಲ್ಲಿ ಹಂತಕರು ಬಿಡುಗಡೆ ಆಗದಂತೆ ಸಾಕ್ಷಿ ಪಕ್ಕಾ ಮಾಡಿಕೊಂಡು ಬಂಧಿಸುತ್ತೇವೆ ‘ ಎಂದು ಬೆಳಗಾವಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com