ಸುಪ್ರೀಂ ಕೋರ್ಟ್ ಕಾವೇರಿ ತೀರ್ಪು ಸ್ವಲ್ಪ ಮಟ್ಟಿಗೆ ತೃಪ್ತಿ ಕೊಟ್ಟಿದೆ : ಜಿ.ಮಾದೇಗೌಡ

ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ತೀರ್ಪು ಹೊರ ಬಂದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸಭೆ ನಡೆಸಿದ ಕಾವೇರಿ ಹಿತರಕ್ಷಣಾ ಸಮಿತಿ ಸಭೆ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಮಾದೇಗೌಡ್ರ ನೇತೃತ್ವದಲ್ಲಿ ಸಭೆ ನಡೆಯಿತು.

ಮಂಡ್ಯದಲ್ಲಿ ಕಾವೇರಿ ಹೋರಾಟಗಾರ ಜಿ. ಮಾದೇಗೌಡ ಹೇಳಿಕೆ ನೀಡಿದ್ದಾರೆ. ‘ ಸುಪ್ರೀಂಕೋರ್ಟ್ ತೀರ್ಪು ಮಂಡ್ಯ ಜಿಲ್ಲೆಯ ನಮಗೆ ಸ್ವಲ್ಪ ಮಟ್ಟಿಗೆ ತೃಪ್ತಿ ಕೊಟ್ಟಿದೆ. ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳೆ ಕಚ್ಚಾಡ್ತಿದ್ರಿಂದ ತೀರ್ಪಿನ ಬಗ್ಗೆ ಅನುಮಾನವಿತ್ತು ‘ eಎಂದಿದ್ದಾರೆ.

‘ ದೇಶದಲ್ಲಿ ಇಡೀ ವ್ಯವಸ್ಥೆಯೇ ಕೆಟ್ಟು ಹೋಗಿದೆ. ನೆನ್ನೆ ಕೊಟ್ಟ ಸುಪ್ರೀಂಕೋರ್ಟ್ ಜಯಕ್ಕೆ ಕಾವೇರಿ ಚಳುವಳಿಗೆ ಪಾಲ್ಗೊಂಡ ಎಲ್ಲರೂ ಕಾರಣರಾಗಿದ್ದಾರೆ. ಈ ಸಮಸ್ಯೆಗಳು ಬಗೆ ಹರಿದಿಲ್ಲ ಸಮಸ್ಯೆಗಳು ಹುಟ್ಟಿ ಕೊಳ್ತಾನೆ ಇರ್ತಾವೆ ಅವನ್ನು ನಾವೇ ಬಗೆಹರಿಸಿಕೊಳ್ಳಬೇಕು. ಈ ಸುಪ್ರೀಕೋರ್ಟ್ ಜಯಕ್ಕೆ ಕಾರಣರಾದವರಿಗೆ ಅಭಿನಂಧನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಿದ್ದೇವೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com