ಕಾಶ್ಮೀರದ ಸಿಯಾಚಿನ್‌ನಲ್ಲಿ ಉಸಿರುಗಟ್ಟಿ ವಿಜಯಪುರ ಮೂಲದ ಯೋಧ ಸಾವು

ವಿಜಯಪುರ : ಕಾಶ್ಮೀರದ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ವಿಜಯಪುರ ಮೂಲದ ಯೋಧರೊಬ್ಬರು ಉಸಿರುಗಟ್ಟಿ ,ಸಾವಿಗೀಡಾಗಿದ್ದಾರೆ.

ಹುತಾತ್ಮ ಯೋಧರನ್ನು ವಿಜಯಪುರ ಜಿಲ್ಲೆಯ ಹಿತ್ನಾಳ ಗ್ರಾಮದ ಕಾಶಿನಾಥ ಕಲ್ಲಪ್ಪ ತಳವಾರ ಎಂದು ಹೆಸರಿಸಲಾಗಿದ್ದು, ಕಾಶ್ಮೀರದ ಸಿಯಾಚಿನ್‌ನಲ್ಲಿ  ಕರ್ತವ್ಯ ನಿರ್ವಹಿಸುವ ವೇಳೆ ಆಮ್ಲಜನಕದ ಕೊರತೆಯಿಂದಾಗಿ ಸಾವಿಗೀಡಾಗಿದ್ದಾರೆ.

ಯೋಧನ ಸಾವಿನ ಹಿನ್ನೆಲೆಯಲ್ಲಿ ವಿಜಯಪುರದ ಹಿತ್ನಾಳ ಗ್ರಾಮದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ನಾಳೆ ಯೋಧನ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರುವುದಾಗಿ ಹೇಳಲಾಗಿದ್ದು, ನಾಳೆಯೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

 

Leave a Reply

Your email address will not be published.

Social Media Auto Publish Powered By : XYZScripts.com