ಕಾಶ್ಮೀರದ ಸಿಯಾಚಿನ್‌ನಲ್ಲಿ ಉಸಿರುಗಟ್ಟಿ ವಿಜಯಪುರದ ಯೋಧ ಸಾವು

ವಿಜಯಪುರ : ಕಾಶ್ಮೀರದ ಸಿಯಾಚಿನ್‌ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಪುರದ ಯೋಧ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಹುತಾತ್ಮ ಯೋಧರನ್ನು ವಿಜಯಪುರದ ಉತ್ನಾಳ ಗ್ರಾಮದ ಕಾಶಿನಾಥ ಕಲ್ಲಪ್ಪ ತಳವಾರ ಎಂದು ಹೆಸರಿಸಲಾಗಿದೆ. ಜಮ್ಮು-ಕಾಶ್ಮೀರದ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಆಮ್ಲಜನಕ ಸಿಗದೆ ಉಸಿರುಗಟ್ಟಿ ಅಸುನೀಗಿದ್ದಾರೆ.

ಯೋಧನ ಸಾವಿನಿಂದಾಗಿ ಉತ್ನಾಳದ ಗ್ರಾಮದಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ನಾಳೆ ಮೃತ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುವುದಾಗಿ ಹೇಳಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com