ರಾಹುಲ್‌ ಒಬ್ಬ Part Time ಪೊಲಿಟಿಶಿಯನ್‌ , ನಮಗೆಲ್ಲ ಅವರು ಲೆಕ್ಕಕ್ಕಿಲ್ಲ : ಪ್ರಹ್ಲಾದ್‌ ಜೋಷಿ

ಕಲಬುರಗಿ : ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ಪಾರ್ಟ್‌ಟೈಮ್ ಪೊಲಿಟಿಷಿಯನ್‌ ಎಂದು ಬಿಜೆಪಿ ಸಂಸದ ಪ್ರಹ್ಲಾದ್‌ ಜೋಷಿ ವ್ಯಂಗ್ಯ ಮಾಡಿದ್ದಾರೆ.
ಸತ್ತವರನ್ನೆಲ್ಲ  ಬಿಜೆಪಿ ತಮ್ಮವರು ಎಂದು ಹೇಳುತ್ತಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸತ್ತವರಲ್ಲ ಬಿಜೆಪಿಯವರಲ್ಲ. ಆದರೆ ಬಿಜೆಪಿಯವರು ಸತ್ತವರ ಮನೆಗೆ ಹೋಗಿ ಮರಣೋತ್ತರವಾಗಿ ಪಕ್ಷದ ಸದಸ್ಯತ್ವ ಮಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಆರೋಪಿಸುತ್ತಾರೆ. ಸತ್ತವರು ಯಾರೇ ಆಗಿರಲಿ ಅವರ ಬಗ್ಗೆ ನಮಗೆ ಕಾಳಜಿಯಿದೆ. ಒಂದು ರಾಜ್ಯದ ಗೃಹಮಂತ್ರಿಯಾಗಿ ಇಷ್ಟು ಕೀಉ ಮಟ್ಟದ ಮಾತನಾಡಬಾರದು. ಗೃಹ ಸಚಿವರೆನ್ನುವುದು ನಿಮಗೆ ನೆನಪಿರಲಿಿ. ಗಲ್ಲಿಯ ನಾಯಕಂತೆ ಮಾತನಾಡಬೇಡಿ. ತಮ್ಮ ಸ್ಥಾನಕ್ಕೆ ಶೋಭೆ ತರುವಂತಹ ಮಾತನಾಡಿ ಎಂದಿದ್ದಾರೆ.
ಇದೇ ವೇಳೆ ರಾಹುಲ್‌ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ ಜೋಷಿ, ರಾಹುಲ್‌ ಗಾಂಧಿ ನಮಗೆ ಪ್ರಮಾಣ ಪತ್ರ ಕೊಡುವುದು ಬೇಡ. ರಾಹುಲ್ ಒಬ್ಬ ಪಾರ್ಟ್‌ಟೈಮ್‌ ಪೊಲಿಟಿಶಿಯನ್ನು , ಅವರನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com