JDSನಿಂದ ಚುನಾವಣಾ ರಣಕಹಳೆ : ‘ವಿಕಾಸ ಪರ್ವ’ಕ್ಕೆ ಸಾಥ್‌ ನೀಡಿದ ಮಾಯಾವತಿ

ಬೆಂಗಳೂರು : ಯಲಹಂಕದಲ್ಲಿ ಆಯೋಜಿಸಲಾಗಿರುವ ಜೆಡಿಎಸ್‌ ವಿಕಾಸ ಪರ್ವಕ್ಕೆ ಜನಸಾಗರವೇ ಹರಿದುಬಂದಿದೆ.

ಇದೇ ಸಮಾರಂಭದಲ್ಲಿ ಬಿಎಸ್‌ಪಿ ನಾಯಕಿ ಮಾತನಾಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಎಸ್‌ಪಿ, ಜೆಡಿಎಸ್‌ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಮಾಯಾವತಿ, ಮೋದಿ ವಿದೇಶದಿಂದ ಕಪ್ಪುಹಣ ತಂದು ಜನರ ಖಾತೆಗಳಿಗೆ ಹಾಕುವುದಾಗಿ ಹೇಳಿದ್ದರು. ಆದರೆ ಒಂದೇ ಒಂದು ರೂ ತಂದಿಲ್ಲ. ನಿರುದ್ಯೋಗಿಗಳು ಬೀದಿಗೆ ಬೀಳುವಂತಾಗಿದೆ. ದೇಶದ ಅಭಿವೃದ್ದಿ ಮಾಡುತ್ತೇನೆ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುತ್ತೇನೆ ಎಂದಿದ್ದ ಮೋದಿ ಪಕೋಡಾ ಮಾರಿ ಜೀವನ ಮಾಡಿ ಎನ್ನುತ್ತಿದ್ದಾರೆ.

ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು ಕಾಂಗ್ರೆಸ್‌ ಒಪ್ಪಿರಲಿಲ್ಲ. ರಾಜ್ಯದಲ್ಲೂ ಸಹ ದಲಿತರನ್ನು ಕಾಂಗ್ರೆಸ್‌ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಪ್ರಜೆಯೂ ಮತವೂ ಮುಖ್ಯ. ದಯವಿಟ್ಟು ಎಲ್ಲರೂವ ಮತನೀಡುವಂತೆ ಮನವಿ ಮಾಡಿದ್ದಾರೆ.

ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಪಿಜಿಆರ್‌ ಸಿಂಧ್ಯಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com