ಮಹಾವೈರಾಗಿ ಬಾಹುಬಲಿಗೆ ಮಹಾ ಮಜ್ಜನ : ಜಲಾಭಿಷೇಕ ನೆರವೇರಿಸಿದ CM

ಹಾಸನ : ಶ್ರವಣ ಬೆಳಗೊಳದ ವೈರಾಗ್ಯ ಮೂರ್ತಿ ಬಾಹುಬಲಿಯ 88ನೇ ಮಹಾಮಸ್ತಕಾಭಿಶೇಕಕ್ಕೆ ಶನಿವಾರ ಚಾಲನೆ ದೊರೆತಿದೆ. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದು, ಬಾಹುಬಲಿಗೆ ಜಲಾಭಿಷೇಕ ಮಾಡಿದ್ದಾರೆ.
ಶನಿವಾರ ಮಧ್ಯಾಹ್ನ ವರ್ಧಮಾನ ಸಾಗರ್  ಮಹಾರಾಜ್‌ ಅವರು ಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಜೈನ ಮಹಾಮುನಿಗಳು, ಗಣ್ಯರು ಸೇರಿದಂತೆ ಅನೇಕರು ಜಲಾಭಿಷೇಕ ಮಾಡುವ ಮೂಲಕ ಮಸ್ತಕಾಭಿಷೇಕದ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ.
ಮಹಾ ಮಜ್ಜನದ ವೇಳೆ ದೇಶದ ಹಲವೆಡೆಯಿಂದ ಬಂದಿದ್ದ ಸಾವಿರಾರು ಮಂದಿ ಭಕ್ತರು ಮಹಾಮಜ್ಜನಕ್ಕೆ ಸಾಕ್ಷಿಯಾಗಿದ್ದು, ಬಾಹುಬಲಿಯ ಮಜ್ಜನವನ್ನು ಕಣ್ತುಂಬಿಕೊಂಡರು.
ಸಿಎಂ ಸಿದ್ದರಾಮಯ್ಯ ಅವರಿಂದ ಜಲಾಭಿಷೇಕ
ಸಿ ಎಂ ಸಿದ್ದರಾಮಯ್ಯ ಅವರು ಕಾಲ್ನಡಿಗೆಯಲ್ಲೆ ಬೆಟ್ಟ ಹತ್ತಿ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಿದರು.  ಈ ವೇಳೆ ಸಚಿವ. ಎ.ಮಂಜು, ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಸಿಎಂಗೆ ಸಾಥ್ ನೀಡಿದ್ದಾರೆ.

Leave a Reply

Your email address will not be published.