Cricket : ವಿರಾಟ್ ಕೊಹ್ಲಿ ಭರ್ಜರಿ ಶತಕ : 5-1 ರಿಂದ ಸರಣಿ ಗೆದ್ದ ಟೀಮ್ ಇಂಡಿಯಾ

ಸೆಂಚುರಿಯನ್ ನ ಸುಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಶುಕ್ರವಾರ ನಡೆದ 6ನೇ ಏಕದಿನ ಪಂದ್ಯದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಸರಣಿಯನ್ನು 5-1 ರಿಂದ ಜಯಿಸಿದೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ದಕ್ಷಿಣ ಆಪ್ರಿಕಾ 46.5 ಓವರುಗಳಲ್ಲಿ 204 ಕ್ಕೆ ಆಲೌಟ್ ಆಯಿತು. ಖಾಯಾ ಜೊಂಡೊ 54 ಹಾಗೂ ಆ್ಯಂಡಿಲ್ ಫೆಹ್ಲುಕ್ವಾಯೋ 34 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಭಾರತ 32.1 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿ ಗೆಲುವು ಸಾಧಿಸಿತು. ನಾಯಕ ವಿರಾಟ್ ಕೊಹ್ಲಿ 35ನೇ ಏಕದಿನ ಶತಕ ಬಾರಿಸಿದರು. 96 ಎಸೆತಗಳನ್ನೆದುರಿಸಿದ ಕೊಹ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನು ಸಿಡಿಸಿ 126 ರನ್ ಗಳಿಸಿದರು.

Image result for odi series win india south africa centurion

ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 558 ರನ್ ಗಳಿಸಿದ ವಿರಾಟ್ ಕೊಹ್ಲಿ ‘ ಪಂದ್ಯಶ್ರೇಷ್ಟ ‘ ಹಾಗೂ ‘ ಸರಣಿ ಶ್ರೇಷ್ಟ ‘ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com